ಧಾರವಾಡ: ನೆರೆ ಪರಿಹಾರ ನೀಡದಿದ್ದರೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ಗೆ ಹೈಕಮಾಂಡ್ ಶೋಕಾಸ್ ನೋಟಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಅಂತಾ ಕೇಳಿದ್ರೇ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತ್ರ ನೋ ಕಮೆಂಟ್ಸ್ ಅಂತಾ ಹೇಳಿದಾರೆ.ಉತ್ತರಕರ್ನಾಟಕದಲ್ಲಿ ನೆರೆ ಬಂದಿದ್ದರಿಂದ ಜಿಲ್ಲಾಡಳಿತ ಅಲ್ಲೇ ಕೆಲಸದಲ್ಲಿ ಇದೆ. ಅದಕ್ಕಾಗಿ ಬೆಳಗಾವಿಯಲ್ಲಿ ಅಧಿವೇಶನ ಮಾಡುತ್ತಿಲ್ಲ ಎಂದು ಹೇಳಿದರು.
ಅಧಿವೇಶನದಲ್ಲಿ ಮಾಧ್ಯಮದವರಿಗೆ ಪ್ರವೇಶ ನಿರಾಕರಣೆ ವಿಚಾರವಾಗಿ ಮಾತನಾಡಲು ಸಚಿವ ಜಗದೀಶ ಶಟ್ಟರ್ ನಿರಾಕರಿಸಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ನನಗೆ ಆ ಬಗ್ಗೆ ಗೊತ್ತಿಲ್ಲ. ನೀವು ಸ್ಪೀಕರ್ ಜೊತೆಯಲ್ಲಿ ಆ ಬಗ್ಗೆ ಸಮಾಲೋಚನೆ ಮಾಡಿ ಎಂದು ಹೇಳಿದರು. ಇನ್ನು, ಸ್ಪೀಕರ್ ಹಾಗೂ ಸಿಎಂ ಈ ಬಗ್ಗೆ ಮಾತನಾಡಿದ್ದು ನನಗೆ ಗೊತ್ತಿಲ್ಲ. ಮಾಡಿದರೆ, ಬಿಟ್ಟರೇ ಅನ್ನೋ ರೆ ಪ್ರಶ್ನೆಗೆ ನಾನು ಉತ್ತರ ಕೊಡಲ್ಲ ಎಂದ ಅವರು, ನಿರ್ಧಾರ ತೆಗೆದುಕೊಂಡ ನಂತರ ಅದಕ್ಕೆ ನಾನು ಪ್ರತಿಕ್ರಿಯಿಸುವೆ ಅಂದರು.