ಕರ್ನಾಟಕ

karnataka

ETV Bharat / state

ರಸ್ತೆ ಮಧ್ಯದಲ್ಲೇ ಗುಂಡಿ : ಹುಬ್ಬಳ್ಳಿಯಲ್ಲಿ ಅಧಿಕಾರಿಗಳ ವಿರುದ್ಧ ಜನರು ಕಿಡಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಮನೆಯ ಹತ್ತಿರದಲ್ಲಿರುವ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಆದರೆ ಯಾವೊಬ್ಬ ಅಧಿಕಾರಿಯೂ ದುರಸ್ತಿಗೆ ಕಾರ್ಯಕ್ಕೆ ಮುಂದಾಗಿಲ್ಲ. ಇದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

road collapses in hubli
ಹುಬ್ಬಳ್ಳಿಯಲ್ಲಿ ಹದಗೆಟ್ಟ ರಸ್ತೆ

By

Published : Jan 15, 2022, 9:48 PM IST

ಹುಬ್ಬಳ್ಳಿ:ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಅವರು ಓಡಾಡುವ ರಸ್ತೆಯಲ್ಲಿ ಗುಂಡಿ ಬಿದ್ದು ಅವ್ಯವಸ್ಥೆ ತಲೆದೋರಿದೆ. ಆದರೂ ಯಾವೊಬ್ಬ ಅಧಿಕಾರಿಯೂ ಇದರ ದುರಸ್ತಿಗೆ ಮುಂದಾಗಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ರಸ್ತೆ ಮಧ್ಯದಲ್ಲೇ ಗುಂಡಿ

ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿ ಅವರ ಮನೆಯ ಹತ್ತಿರದಲ್ಲಿರುವ ರಸ್ತೆಯಲ್ಲಿ ಡ್ರೈನೇಜ್ ಹೋಲ್ ಕಳಪೆ ಕಾಮಗಾರಿಯಿಂದ ಸುಮಾರು 15 ಅಡಿಗಳಷ್ಟು ತಗ್ಗು ಬಿದ್ದಿದೆ. ಇದರಿಂದ ಜನರು ಸಂಚರಿಸಲು ಪರದಾಡುತ್ತಿದ್ದು, ಜನಪ್ರತಿನಿಧಿಗಳಾಗಲಿ, ಪಾಲಿಕೆ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಇದರಿಂದ ಕೋಪಗೊಂಡ ಜನರು ಅಸಮಾಧಾನ ಹೊರ ಹಾಕಿದ್ದಾರೆ.

ಇದರಿಂದ ಯಾವುದೇ ಅಪಾಯ ಆಗದಂತೆ ಜನರೇ ಸ್ವಯಂ ಪ್ರೇರಿತರಾಗಿ ಬ್ಯಾರಿಕೇಡ್​ ಹಾಕಿ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಸೂಚನೆ ನೀಡುತ್ತಿದ್ದಾರೆ.

ಇದನ್ನೂ ಓದಿ:ಹಾವೇರಿ: ಸಂಕ್ರಾಂತಿ ದಿನವೇ ಭೀಕರ ಅಪಘಾತ.. ಇಬ್ಬರು ಮಕ್ಕಳು ಸೇರಿ ನಾಲ್ವರು ದುರ್ಮರಣ

ABOUT THE AUTHOR

...view details