ಕರ್ನಾಟಕ

karnataka

ETV Bharat / state

ಧಾರವಾಡದ ಮಾವು ಸಂಸ್ಕರಣ,ಶೀತಲ ಗೃಹ ಘಟಕಕ್ಕೆ ಡಿಸಿ ಭೇಟಿ: ಪರಿಶೀಲನೆ - Dharwad

ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಿರುವ ಇನ್ಫ್ರಾ ಫೈನ್ ಫುಡ್ಸ್ ಕೈಗಾರಿಕೆಯ ಮಾವು ಸಂಸ್ಕರಣ ಹಾಗೂ ಶೀತಲ ಗೃಹ ಘಟಕಕ್ಕೆ ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರವಿಕುಮಾರ ಸುರಪುರ ಹಾಗೂ ಜಿಲ್ಲಾಧಿಕಾರಿ ನಿತೇಶ್​ ಪಾಟೀಲ ಭೇಟಿ ನೀಡಿ, ಪರಿಶೀಲಿಸಿದರು.

Dharwad
ಮಾವು ಸಂಸ್ಕರಣ ಹಾಗೂ ಶೀತಲಗೃಹ ಘಟಕಕ್ಕೆ ಡಿಸಿ ಭೇಟಿ, ಪರಿಶೀಲನೆ

By

Published : Feb 15, 2021, 1:30 PM IST

ಧಾರವಾಡ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರವಿಕುಮಾರ ಸುರಪುರ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ 2020-21 ನೇ ಸಾಲಿನ ಯೋಜನೆಯಡಿ ನೀಡಿರುವ ಅನುದಾನದಲ್ಲಿ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಿರುವ ಇನ್ಫ್ರಾ ಫೈನ್ ಫುಡ್ಸ್ ಕೈಗಾರಿಕೆಯ ಮಾವು ಸಂಸ್ಕರಣ ಹಾಗೂ ಶೀತಲ ಗೃಹ ಘಟಕಕ್ಕೆ ಭೇಟಿ ನೀಡಿದರು.

ಮಾವು ಸಂಸ್ಕರಣ ಹಾಗೂ ಶೀತಲಗೃಹ ಘಟಕಕ್ಕೆ ಡಿಸಿ ಭೇಟಿ, ಪರಿಶೀಲನೆ

ಉತ್ತರ ಕರ್ನಾಟಕದಲ್ಲಿ ಅತ್ಯಂತ ದೊಡ್ಡ ಮಾವು ಸಂಸ್ಕರಣ ಹಾಗೂ ಶೀತಲ ಗೃಹವಾಗಿರುವ ಈ ಕೈಗಾರಿಕೆಗೆ ಬಹು ಜಿಲ್ಲೆಗಳಿಂದ ಮಾವು ಪೂರೈಕೆ ಆಗಲಿದೆ. ಮಾವು ಸೀಜನ್ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳು ಇಂದು ಭೇಟಿ ನೀಡಿ, ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು, ಫಲಾನುಭವಿ ರೈತರು ಹಾಗೂ ಕೈಗಾರಿಕಾ ಉದ್ಯಮಿಗಳು ಜೊತೆಯಲ್ಲಿದ್ದರು.

ABOUT THE AUTHOR

...view details