ಕರ್ನಾಟಕ

karnataka

ETV Bharat / state

ನೋಟು ಈಸ್ಕೊಳ್ಳಿ ಅನರ್ಹರ ವಿರುದ್ಧ ವೋಟ್​ ಮಾಡಿ... ಮತದಾರರಿಗೆ ಡಿಕೆಶಿ ಟಿಪ್ಸ್​​!

ಡಿಸೆಂಬರ್ 9ರ ನಂತರ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಈಗಾಗಲೇ ಮಹಾರಾಷ್ಟ್ರ, ಹರಿಯಾಣದಲ್ಲಿ ನೋಡಿದ್ದೇವೆ. ಕರ್ನಾಟಕ ಚುನಾವಣೆಯಲ್ಲಿ ಕೂಡ ಏನು ಬೇಕಾದರೂ ಬದಲಾವಣೆ ಆಗಬಹುದು ಎಂದು ಡಿಕೆಶಿ ಭವಿಷ್ಯ ನುಡಿದಿದ್ದಾರೆ.

D K Shivakumar
ನನಗೆ ಉಸಿರಾಡಲು ಬಿಡಿ ಎಂದು ಐಟಿ ಹಾಗೂ ಇಡಿ ಇಲಾಖೆಗೆ ಡಿಕೆಶಿ ಮನವಿ

By

Published : Dec 2, 2019, 1:44 PM IST

ಹುಬ್ಬಳ್ಳಿ:ಅನರ್ಹರು ಮತದಾರರ ಸ್ವಾಭಿಮಾನ ಕೆರಳಿಸಿದ್ದಾರೆ. ಯಾರೂ ಕೂಡ ಇವರಿಗೆ ರಾಜೀನಾಮೆ ಕೊಡಲು ಹೇಳಲಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ರಾಜೀನಾಮೆ ನೀಡಿದ್ದಾರೆ. ಆದರೆ ಇಷ್ಟು ದಿನ ರಾಜಕೀಯದಲ್ಲಿ ಅವರು ಮಾಡಿರುವುದಾರೂ ಏನು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅನರ್ಹರ ವಿರುದ್ಧ ವಾಗ್ದಾಳಿ ನಡೆಸಿದರು.

ನನಗೆ ಉಸಿರಾಡಲು ಬಿಡಿ ಎಂದು ಐಟಿ ಹಾಗೂ ಇಡಿ ಇಲಾಖೆಗೆ ಡಿಕೆಶಿ ಮನವಿ

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಮತದಾರರು ಬಿಜೆಪಿ ಅವರಿಂದ ನೋಟು ತೆಗೆದುಕೊಂಡು ಅನರ್ಹರ ವಿರುದ್ಧ ಮತ ಹಾಕುತ್ತಾರೆ ಎಂದು ಅನರ್ಹರ ವಿರುದ್ಧ ಕಿಡಿ ಕಾರಿದರು. ಡಿಸೆಂಬರ್ 9ರ ನಂತರ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಈಗಾಗಲೇ ಮಹಾರಾಷ್ಟ್ರ, ಹರಿಯಾಣದಲ್ಲಿ ನೋಡಿದ್ದೇವೆ. ಕರ್ನಾಟಕ ಚುನಾವಣೆಯಲ್ಲಿ ಏನು ಬೇಕಾದರೂ ಬದಲಾವಣೆ ಆಗಬಹುದು ಎಂದರು.

ಜಾರಿ ನಿರ್ದೇಶನಾಲಯದ ವಿಚಾರಣೆ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಐಟಿ ಹಾಗೂ ಇಡಿ ಇಲಾಖೆಗೆ ಸ್ವಲ್ಪ ಸಮಯಾವಕಾಶ ಕೇಳಿದ್ದೇನೆ. ಆದರೇ ಅವರು ಇಂದೇ ಹಾಜರಾಗಬೇಕು ಎನ್ನುತ್ತಿದ್ದಾರೆ. ನನಗೆ ಉಸಿರಾಡಲು ಬಿಡಿ ಎಂದು ಮನವಿ ಮಾಡಿದ್ದೇನೆ. ನಾನೂ ಕೂಡ ಕಾನೂನಾತ್ಮಕವಾಗಿ ಎಲ್ಲವನ್ನೂ ತಿಳಿದುಕೊಳ್ಳಬೇಕಾಗಿದೆ. ಆದರೇ ಕಾನೂನು ಅವರ ಕೈಯಲ್ಲಿದೇ ಏನ ಬೇಕಾದರು ಮಾಡುತ್ತಾರೆ. ಏನು ಮಾಡಲು ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details