ಕರ್ನಾಟಕ

karnataka

ETV Bharat / state

ಕೊರೊನಾ ಗೆದ್ದು ಬಂದ ಧಾರವಾಡ ಸಂಚಾರಿ ಠಾಣೆ ಸಿಬ್ಬಂದಿಗೆ ಅದ್ಧೂರಿ ಸ್ವಾಗತ

ಕೊರೊನಾ ವೈರಸ್ ವಿರುದ್ಧ ಹೋರಾಡಿ ಇಬ್ಬರು ಪೊಲೀಸ್ ಸಿಬ್ಬಂದಿ ಗುಣಮುಖರಾಗಿ ಕೆಲಸಕ್ಕೆ ಹಾಜರಾದರು. ಅವರಿಗೆ ಸಹೋದ್ಯೋಗಿಗಳು ಶಾಲು ಹೊದಿಸಿ ಹೂವಿನ ಹಾರ ಹಾಕುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.

ಧಾರವಾಡ ಸಂಚಾರಿ ಠಾಣೆ ಸಿಬ್ಬಂದಿಗೆ ಅದ್ಧೂರಿ ಸ್ವಾಗತ
ಧಾರವಾಡ ಸಂಚಾರಿ ಠಾಣೆ ಸಿಬ್ಬಂದಿಗೆ ಅದ್ಧೂರಿ ಸ್ವಾಗತ

By

Published : Jul 31, 2020, 5:34 PM IST

ಧಾರವಾಡ: ನಗರದ ಸಂಚಾರಿ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ಕೊರೊನಾದಿಂದ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾದರು. ಕರ್ತವ್ಯಕ್ಕೆ ಹಾಜರಾದ ಇಬ್ಬರು ಕೊರೊನಾ ವಾರಿಯರ್ಸ್​ಗೆ ಸಹೋದ್ಯೋಗಿಗಳು ಶಾಲು ಹೊದಿಸಿ ಹೂವಿನ ಹಾರ ಹಾಕುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.

ಧಾರವಾಡ ಸಂಚಾರಿ ಠಾಣೆ ಸಿಬ್ಬಂದಿಗೆ ಅದ್ಧೂರಿ ಸ್ವಾಗತ

ಕಳೆದ ಕೆಲವು ದಿನಗಳ ಹಿಂದೆ ಕೊರೊನಾ ವಾರಿಯರ್ಸ್​ ಆದ ಬಸವರಾಜ ದೊಂಬರಕೊಪ್ಪ ಹಾಗೂ ಮಂಜುಳಾ ಬಡಿಗೇರ ಸೋಂಕಿಗೆ ತುತ್ತಾಗಿದ್ದರು. ಹಾಗಾಗಿ ಅವರನ್ನು ನಿಗದಿತ ಆಸ್ಪತ್ರೆಗೆ ದಾಖಲು‌ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು.

ಕೊರೊನಾ ವೈರಸ್ ವಿರುದ್ಧ ಹೋರಾಡಿ ಇಬ್ಬರು ಪೊಲೀಸ್ ಸಿಬ್ಬಂದಿ ಗುಣಮುಖರಾಗಿ ಕೆಲಸಕ್ಕೆ ಹಾಜರಾದರು. ಅವರಿಗೆ ಸಹೋದ್ಯೋಗಿಗಳು ಅಭಿನಂದನೆ ಸಲ್ಲಿಸುವ ಮೂಲಕ ಠಾಣೆಗೆ ಸ್ವಾಗತಿಸಿಕೊಂಡಿದ್ದಾರೆ.

ABOUT THE AUTHOR

...view details