ಹುಬ್ಬಳ್ಳಿ : ಕಲಘಟಗಿ ತಾಲೂಕಿನ ತಂಬೂರ,ದೇವಿಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮತ್ತೆ ಆನೆಗಳ ಹಾವಳಿ ಹೆಚ್ಚಾಗಿದ್ದು,ರೈತರ ಬೆಳೆ ನಷ್ಟವಾಗಿದೆ.
ಕಲಘಟಗಿಯಲ್ಲಿ ಕಾಡಾನೆ ಹಾವಳಿ : ರೈತರ ಬೆಳೆ ನಾಶ
ಆನೆ ದಾಳಿಯಿಂದ ಬೆಳೆ ಹಾನಿಯಾದ ರೈತರಿಗೆ ಸರ್ಕಾರ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.ಐದು ಆನೆಗಳು ಗುಂಡಿಯಲ್ಲಿ ನೀರು ಕುಡಿಯುತ್ತಿರುವ ದೃಶ್ಯವನ್ನು ರೈತರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ..
ರಾತ್ರಿ ವೇಳೆ ತಂಬೂರ ಗ್ರಾಮದ ಮಂಜುನಾಥ ಹುಲ್ಲಂಬಿ,ಯಲ್ಲಪ್ಪ ಹುಡೇದ,ಶಿವಪ್ಪ ಅಲ್ಲಾಪೂರ ಹಾಗೂ ಇನ್ನೂ ಕೆಲ ರೈತರ ಹೊಲಗಳಿಗೆ ನುಗ್ಗಿರುವ ಐದು ಆನೆಗಳು,ಕಟಾವಿಗೆ ಬಂದ ಗೋವಿನ ಜೋಳ ಹಾಳು ಮಾಡಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ಆನೆಗಳನ್ನು ಕಾಡಿಗೆ ಅಟ್ಟಲು ಕಾರ್ಯಾಚರಣೆ ಮಾಡಿದರೂ ಸಹ ಆನೆಗಳು ಕಾಡಿನೊಳಗೆ ಹೋಗದೆ ರೈತರ ಹೊಲಗಳಿಗೆ ಮತ್ತೆ ಮತ್ತೆ ಲಗ್ಗೆ ಇಡುತ್ತಿವೆ.
ಆನೆ ದಾಳಿಯಿಂದ ಬೆಳೆ ಹಾನಿಯಾದ ರೈತರಿಗೆ ಸರ್ಕಾರ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.ಐದು ಆನೆಗಳು ಗುಂಡಿಯಲ್ಲಿ ನೀರು ಕುಡಿಯುತ್ತಿರುವ ದೃಶ್ಯವನ್ನು ರೈತರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಕೂಡಲೇ ಆನೆ ಹಾವಳಿ ತಪ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.