ಧಾರವಾಡ :ಜಿಲ್ಲೆಯ ಟಾಟಾ ಮಾರ್ಕೊಪೋಲೊದ 8 ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಬೇಲೂರ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯಲ್ಲಿ ಸೋಂಕು ಕಂಡು ಬಂದಿದ್ದರಿಂದ ಅಲ್ಲಿನ ಸಿಬ್ಬಂದಿಯಲ್ಲಿ ಆತಂಕ ಶುರುವಾಗಿದೆ.
ಧಾರವಾಡದ ಮಾರ್ಕೊಪೋಲೊ ಕಂಪನಿಗೆ ಕಾಲಿಟ್ಟ ಕೊರೊನಾ - ಟಾಟಾ ಮಾರ್ಕೊಪೋಲೊ ಕಂಪನಿಯ ಏಂಟು ಸಿಬ್ಬಂದಿಯಲ್ಲಿ ಕೊರೊನಾ
ಟಾಟಾ ಮಾರ್ಕೊಪೋಲೊದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ದೂರು ಬಂದಿತ್ತು. ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಟಾಟಾ ಮಾರ್ಕೊಪೋಲೊದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ದೂರು ಬಂದಿತ್ತು. ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಲ್ಲ ಸುರಕ್ಷತಾ ಕ್ರಮ ಕೈಗೊಂಡ ಬಗ್ಗೆ ವರದಿ ಕೊಟ್ಟಿದ್ದಾರೆ. ಯಾವುದೇ ನೂನ್ಯತೆಗಳು ಕಂಡು ಬಂದಿಲ್ಲ ಎಂದು ಹೇಳಿದ್ದಾರೆ.
ಈಗಾಗಲೇ ಅಲ್ಲಿ 8 ಕೇಸ್ ಪಾಟಿಸಿವ್ ಬಂದಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ಅವರ ಪ್ರೈಮರಿ ಸಂಪರ್ಕಕ್ಕೆ ಬಂದವರನ್ನು ತಪಾಸಣೆ ಮಾಡಿದ್ದೇವೆ. ಇನ್ನೊಂದು ಆರೋಗ್ಯ ತಂಡ ಮಾರ್ಕೊಪೋಲೊಗೆ ಹೋಗಿ ಕಾರ್ಮಿಕರ ತಪಾಸಣೆ ಮಾಡಲಿದೆ ಎಂದು ತಿಳಿಸಿದ್ರು.