ಕರ್ನಾಟಕ

karnataka

ETV Bharat / state

ರೈಲ್ವೆ ಆದಾಯಕ್ಕೂ ಕೊಳ್ಳಿ ಇಟ್ಟ ಕೊರೊನಾ.. ನೈರುತ್ಯ ರೈಲ್ವೆಗೆ ಕೋಟಿ ರೂ. ನಷ್ಟ.. - ರೈಲ್ವೇ ಕೊರೊನಾ ಸುದ್ದಿ

ಈಗಾಗಲೇ ಹುಬ್ಬಳ್ಳಿಯ ರೈಲ್ವೆ ವಿಭಾಗಕ್ಕೆ ಒಂದು ಕೋಟಿ ರೂಪಾಯಿ ನಷ್ಟವಾಗಿದೆ. ಅಷ್ಟೇ ಅಲ್ಲ, ನಿತ್ಯ ಪ್ರಯಾಣಿಸುವವರ ಸಂಖ್ಯೆಯೂ ಇಳಿಕೆಯಾಗಿದೆ. ಸದಾ ಪ್ರಯಾಣಿಕರಿಂದ ತುಂಬಿರುತ್ತಿದ್ದ ಟಿಕೇಟ್ ಕೌಂಟರ್‌ಗಳು ಖಾಲಿ‌ ಖಾಲಿ‌ಯಾಗಿವೆ.

Hubli Railway
ಹುಬ್ಬಳ್ಳಿ ರೈಲ್ವೆ

By

Published : Mar 21, 2020, 2:23 PM IST

ಹುಬ್ಬಳ್ಳಿ:ಕೊರೊನಾ ವೈರಸ್ ಮುನ್ನೆಚ್ಚರಿಕಾ ಕ್ರಮವಾಗಿ ನೈರುತ್ಯ ರೈಲ್ವೆ ವಿಭಾಗದ 32 ರೈಲುಗಳ‌ ಸಂಚಾರ ರದ್ದು ಮಾಡಲಾಗಿದೆ. ಇದರಿಂದಾಗಿ 7 ದಿನದಲ್ಲಿ 24 ಸಾವಿರ ಪ್ರಯಾಣಿಕರು ಮುಂಗಡ ಟಿಕೇಟ್ ರದ್ದುಗೊಳಿಸಿದ್ದಾರೆ.

ಈಗಾಗಲೇ ಹುಬ್ಬಳ್ಳಿಯ ರೈಲ್ವೆ ವಿಭಾಗಕ್ಕೆ ಒಂದು ಕೋಟಿ ರೂಪಾಯಿ ನಷ್ಟವಾಗಿದೆ. ಅಷ್ಟೇ ಅಲ್ಲ, ನಿತ್ಯ ಪ್ರಯಾಣಿಸುವವರ ಸಂಖ್ಯೆಯೂ ಇಳಿಕೆಯಾಗಿದೆ. ಸದಾ ಪ್ರಯಾಣಿಕರಿಂದ ತುಂಬಿರುತ್ತಿದ್ದ ಟಿಕೇಟ್ ಕೌಂಟರ್‌ಗಳು ಖಾಲಿ‌ ಖಾಲಿ‌ಯಾಗಿವೆ.

ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಿಭಾಗದಲ್ಲಿ ಮಾರ್ಚ್ 12 ರಿಂದ 20ರವರೆಗೆ 36,731 ಪ್ರಯಾಣಿಕರುಮುಂಗಡ ಟಿಕೇಟ್ ಬುಕ್ ಮಾಡಿದ್ದರು. ಅದರಲ್ಲಿ 24, 294 ಪ್ರಯಾಣಿಕರು ಟಿಕೇಟ್ ಕ್ಯಾನ್ಸಲ್ ಮಾಡಿದ್ದಾರೆ. ಕಾಯ್ದಿರಿಸದೆ ಟಿಕೇಟ್ ಪಡೆದು ಪ್ರಯಾಣಿಸುತ್ತಿದ್ದ ಪ್ರಯಾಣಿಕರಲ್ಲಿಯೂ ಇಳಿಕೆಯಾಗಿದೆ.

ABOUT THE AUTHOR

...view details