ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿತನಿಂದ ಆಹಾರ ವಿತರಣೆ: ಆಹಾರ ಧಾನ್ಯ ಪಡೆದವರ ಮಾಹಿತಿಗೆ ಡಿಸಿ ಮನವಿ - ಕೊರೊನಾ ಸೋಂಕಿತ ವ್ಯಕ್ತಿ ಆಹಾರ ವಿತರಣೆ

ಮಾ. 27 ರಂದು ಹುಬ್ಬಳ್ಳಿಯ ಡಾಕಪ್ಪಾ ಸರ್ಕಲ್ ನಿಂದ ಕಾಳಮ್ಮನ ಅಗಸಿಯವರೆಗೆ ವಾಸ್ತವ್ಯ ಹೊಂದಿರುವ ಸಾರ್ವಜನಿಕರಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಿದ್ದಾರೆ ಎಂಬ ಮಾಹಿತಿ ಹೊರ ಬಂದಿದ್ದು, ಸೋಂಕಿತನಿಂದ ಆಹಾರ ಧಾನ್ಯ ಪಡೆದವರು ಕೂಡಲೇ ಕೊರೊನಾ ಸಹಾಯವಾಣಿ 1077 ಕರೆಮಾಡಿ ಪರೀಕ್ಷೆಗೆ ಒಳಪಡಬೇಕು ಎಂದು ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Deepa Cholan
ದೀಪಾ ಚೋಳನ್

By

Published : Apr 16, 2020, 9:02 PM IST

ಹುಬ್ಬಳ್ಳಿ:ಕೊರೊನಾ ಸೋಂಕಿತ ವ್ಯಕ್ತಿಯಿಂದ ಮಾ.27 ರಂದು ಆಹಾರ ಧಾನ್ಯ ವಿತರಣೆ ಪಡೆದವರು ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್​​ ಮನವಿ ಮಾಡಿದ್ದಾರೆ.

ಕೋವಿಡ್ 19 ಸೋಂಕಿತರಾಗಿರುವ ನಗರದ ಮುಲ್ಲಾ ಓಣಿಯ ವ್ಯಕ್ತಿಯೊಬ್ಬರು(ರೋಗಿ ನಂಬರ್​-236) ತಮ್ಮ ಗೆಳೆಯರು, ಬಂಧುಗಳ ಜೊತೆಗೂಡಿ ಮಾ. 27ರಂದು ಡಾಕಪ್ಪಾ ಸರ್ಕಲ್ ನಿಂದ ಕಾಳಮ್ಮನ ಅಗಸಿಯವರೆಗೆ ವಾಸ್ತವ್ಯ ಹೊಂದಿರುವ ಸಾರ್ವಜನಿಕರಿಗೆ 5 ಕೆಜಿ ಅಕ್ಕಿ , 2 ಕೆಜಿ ತೊಗರಿಬೇಳೆ, 1 ಕೆಜಿ ಸಕ್ಕರೆ, 2 ಕೆಜಿ ಗೋಧಿ, ಚಹಾಪುಡಿ ವಿತರಿಸಿದ್ದಾರೆ ಎಂದು ಪರಿಶೀಲನೆ ವೇಳೆ ದೃಢ ಪಟ್ಟಿದೆ.

ಈ ಸಂಬಂಧ ಆಹಾರ ಧಾನ್ಯ ಪಡೆದ ಸಾರ್ವಜನಿಕರಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಇದ್ದು, ಸಂಬಂಧಪಟ್ಟವರು ಕೂಡಲೇ ಕೊರೊನಾ ಸಹಾಯವಾಣಿ 1077 ಕರೆಮಾಡಿ ಪರೀಕ್ಷೆಗೆ ಒಳಪಡಬೇಕು ಎಂದು ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details