ಕರ್ನಾಟಕ

karnataka

ETV Bharat / state

ಗೋವಾದಿಂದ ವರ್ಗವಾದ್ರೂ ಬಿಡ್ಲಿಲ್ಲ... ಹುಬ್ಬಳ್ಳಿ ಏರ್​ಪೋರ್ಟ್​ ಅಧಿಕಾರಿಗಳಿಗೆ ಪಾಗಲ್​ ಪ್ರೇಮಿ ಕಾಟವಂತೆ - etv bharat

ತನ್ನ ಪ್ರೇಯಸಿಗಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣ ಸಿಬ್ಬಂದಿಗೆ ಕರೆ ಮಾಡುವ ಪಾಗಲ್​ ಪ್ರೇಮಿಯ ಹುಚ್ಚಾಟ ಹೆಚ್ಚಾಗಿದ್ದು ಇದರಿಂದ ವಿಮಾನ ನಿಲ್ದಾಣದ ಸಿಬ್ಬಂದಿ ತಲೆ ಬಿಸಿ ಮಾಡಿಕೊಂಡಿದ್ದಾರೆ.

ಪಾಗಲ್​ ಪ್ರೇಮಿ ರಾಯ್​​ ಡಿಯಾಸ್

By

Published : Apr 12, 2019, 3:45 PM IST

ಹುಬ್ಬಳ್ಳಿ: ಪಾಗಲ್​ ಪ್ರೇಮಿಯೊಬ್ಬ ನಿರಂತರವಾಗಿ‌ ಫೋನ್​ ಮಾಡಿ ಇಲ್ಲಿನ ವಿಮಾನ ನಿಲ್ದಾಣದ ಸಿಬ್ಬಂದಿಯ ತಲೆ ಬಿಸಿ ಮಾಡಿದ್ದಾನೆ. ಇದರಿಂದ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕಳೆದ ಎರಡು ವರ್ಷಗಳಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ನಿರಂತರವಾಗಿ‌ ಫೋನ್​ ಮಾಡಿದ್ದಲ್ಲದೆ ವಿಮಾನ‌ ನಿಲ್ದಾಣವನ್ನು ಉಡಾಯಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಅಲ್ಲದೆ ಪ್ರಧಾನಿ ಮೋದಿ ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಮತ್ತೆ ಫೋನ್​ ಮಾಡಿ ಬೆದರಿಕೆ ಹಾಕಿದ್ದಾನೆ ಎನ್ನಲಾಗುತ್ತಿದೆ. ಈತನ ಕರೆಯಿಂದ ಭದ್ರತಾ ಸಿಬ್ಬಂದಿಯ ಆತಂಕ‌ ಹೆಚ್ಚಿಸಿದೆ.

ಪಾಗಲ್​ ಪ್ರೇಮಿ ರಾಯ್​​ ಡಿಯಾಸ್

ಗೋವಾ ಮೂಲದ ರಾಯ್​​ ಡಿಯಾಸ್​ ಎಂಬ ವ್ಯಕ್ತಿಯಿಂದ ದಿನಂಪ್ರತಿ ಈ ಕರೆಗಳು ಬರುತ್ತಿದ್ದು ವಿಮಾನ ನಿಲ್ದಾಣದಲ್ಲಿ ತನ್ನ ಪ್ರೇಯಸಿಯೊಬ್ಬಳು ಕೆಲಸ ಮಾಡುತ್ತಿದ್ದಾಳೆ, ಅವಳಿಗೆ ಫೋನ್​ ಕೊಡಿ ಎಂದು ಸಿಬ್ಬಂದಿಗೆ ಕಿರುಕುಳ‌ ನೀಡುತ್ತಿದ್ದಾನಂತೆ. ದುಬೈ ಮೂಲಕ ಇಂಟರ್ನೆಟ್​ ಕರೆಗಳಲ್ಲದೇ ಬೇರೆ ಬೇರೆ ನಂಬರ್​ನಿಂದಲೂ ಕರೆ ಮಾಡಿ ತೊಂದರೆ ಕೊಡುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಈತನ ಪ್ರೇಯಸಿ ಈ ಮೊದಲು ಗೋವಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದು ಪಾಗಲ್​ ಪ್ರೇಮಿಯ ಕಾಟ ತಾಳಲಾರದೇ ಗೋವಾದಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವರ್ಗಾವಣೆಗೊಂಡಿದ್ದಳು. ಅಂದಿನಿಂದ ಈತನ ಹುಚ್ಚಾಟ ತಪ್ಪಿಲ್ಲ. ಪಾಗಲ್​ ಪ್ರೇಮಿಯು ಪ್ರತಿದಿನ ಕರೆ ಮಾಡುತ್ತಿದ್ದು ಇದರಿಂದ ಬೇಸತ್ತ ಸಿಬ್ಬಂದಿ, ಏರ್​ ಟ್ರಾಫಿಕ್​ ಕಂಟ್ರೋಲ್​ ನಂಬರ್​ ಸಹ ಬದಲಿಸಿತ್ತು. ಆದ್ರೆ ಹೇಗೋ ಮತ್ತೆ ನಂಬರ್​ ತಗೆದುಕೊಂಡು ಕರೆ ಮಾಡುತ್ತಿದ್ದಾನೆ. ಇದರಿಂದ ಹಲವು ಸಾರಿ ವಿಮಾನ ಹಾರಾಟಕ್ಕೆ ತೊಂದರೆಯಾಗಿದೆ. ಈ ಬಗ್ಗೆ ಸೈಬರ್​ ಕ್ರೈಮ್​ನಲ್ಲಿ ದೂರು ಸಹ ದಾಖಲಾಗಿದೆ. ಆದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ABOUT THE AUTHOR

...view details