ಕರ್ನಾಟಕ

karnataka

ETV Bharat / state

ವಿಮೆ ತಿರಸ್ಕರಿಸಿದ ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿಗೆ ₹5 ಲಕ್ಷ ದಂಡ

ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಎಸಗಿದ್ದಾರೆ ಎಂದು ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿಗೆ ದಂಡ ವಿಧಿಸಲಾಗಿದೆ.

ಗ್ರಾಹಕ ಆಯೋಗ
ಗ್ರಾಹಕ ಆಯೋಗ

By

Published : Aug 11, 2023, 9:45 PM IST

ಧಾರವಾಡ : ವಿಮೆ ತಿರಸ್ಕರಿಸಿದ ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿಗೆ 5.32.5 ಲಕ್ಷ ರೂ.ಗಳ ದಂಡ ವಿಧಿಸಿ ಜಿಲ್ಲಾ ಗ್ರಾಹಕ ಆಯೋಗ ಆದೇಶಿಸಿದೆ. ಹುಬ್ಬಳ್ಳಿಯ ದತ್ತಾತ್ರೇಯ ಕಾಲೋನಿ ನಿವಾಸಿ ಲಕ್ಷ್ಮೀಕಾಂತ ಖಟವಟೆ ಎಂಬವರು ಎದುರುದಾರ ರಿಲೈನ್ಸ್ ವಿಮಾ ಕಂಪನಿಯಿಂದ ತನ್ನ ಮಾಲೀಕತ್ವದ ಹುಂಡೈ ಕಾರ್ ನಂ.ಕೆಎ-63 ಎಮ್. 0959ಗೆ ಒಟ್ಟು ರೂ.16,606 ಮೊತ್ತದ ಪ್ರೀಮಿಯಂ ಕೊಟ್ಟು ಪ್ಯಾಕೇಜ್ ಪಾಲಿಸಿ ಖರೀದಿಸಿದ್ದರು.

ಪಾಲಿಸಿ ಅವಧಿ 14-06-2021 ರಿಂದ 13-06-2022ರ ವರೆಗೆ ಚಾಲ್ತಿಯಲ್ಲಿತ್ತು. 1-01-2022 ರಂದು ದೂರುದಾರನ ವಾಹನ ಹುಬ್ಬಳ್ಳಿ ಕಾರವಾರ ರಸ್ತೆ ಅಪಘಾತಕ್ಕೀಡಾಗಿ ಕಾರು ಪೂರ್ತಿ ಜಖಂ ಆಗಿತ್ತು. ದೂರುದಾರ ಎದುರುದಾರ ವಿಮಾ ಕಂಪನಿಗೆ ಅಗತ್ಯ ದಾಖಲೆ ಸಮೇತ ಕ್ಲೇಮ ಅರ್ಜಿ ಸಲ್ಲಿಸಿದ್ದರು. ಅಪಘಾತ ಸಮಯದಲ್ಲಿ ಕಾರಿನಲ್ಲಿ ಹೆಚ್ಚುವರಿ ಪ್ರಯಾಣಿಕರು ಇದ್ದುದರಿಂದ ದೂರುದಾರ ಪಾಲಿಸಿ ನಿಯಮಾವಳಿ ಉಲ್ಲಂಘಿಸಿದ್ದಾರೆ ಎಂದು ಅವರ ಕ್ಲೇಮ್ ಅರ್ಜಿಯನ್ನು ತಿರಸ್ಕರಿಸಿದ್ದರು.

ಇದನ್ನೂ ಓದಿ :ಖರೀದಿ ಪತ್ರ ನೋಂದಾಯಿಸಿ ಕೊಡದ ಜಮೀನಿನ ಮಾಲೀಕ: ಗ್ರಾಹಕ ಆಯೋಗದಿಂದ ದಂಡ

ವಿಮಾ ಕಂಪನಿಯ ಕ್ರಮ ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನತೆ ಆಗುತ್ತದೆ ಎಂದು ಹೇಳಿ ರಿಲಯನ್ಸ್ ವಿಮೆ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರಿನ ಬಗ್ಗೆ ಕೂಲಂಕಷವಾಗಿ ಆಯೋಗ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ವಿಚಾರಣೆ ನಡೆಸಿದರು. ದೂರುದಾರ ಪಡೆದ ವಿಮೆ ಪಾಲಿಸಿ ಚಾಲ್ತಿಯಿದ್ದು, ವಿಮಾ ಕಂಪನಿ ನಿಯಮಾವಳಿಯಂತೆ ವಿಮಾ ಹಣವನ್ನು ವಿಮಾದಾರರಿಗೆ ಕೊಡುವುದು ಅವರ ಕರ್ತವ್ಯ. ಆದರೆ ಅಂತಹ ಕರ್ತವ್ಯ ನಿರ್ವಹಣೆಯಲ್ಲಿ ವಿಮಾ ಕಂಪನಿ ವಿಫಲವಾಗಿದೆ. ಆದ್ದರಿಂದ ಅವರು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಎಸಗಿದ್ದಾರೆ ಎಂದು ಅಭಿಪ್ರಾಯಪಟ್ಟು ಆಯೋಗ ತೀರ್ಪು ನೀಡಿದೆ.

ದೂರುದಾರ ವಿಮಾ ಕರಾರಿನಲ್ಲಿ ನಮೂದಿಸಿದ 5ಕ್ಕಿಂತ ಹೆಚ್ಚು 6+ ಜನರು ಅಪಘಾತಕ್ಕೊಳಪಟ್ಟ ವಾಹನದಲ್ಲಿ ಇದ್ದರೂ ಅನ್ನುವ ಒಂದೇ ಕಾರಣದಿಂದ ಅಂತಹ ಅರ್ಜಿಯನ್ನು ತಿರಸ್ಕರಿಸುವುದು ಸೂಕ್ತ ಮತ್ತು ನ್ಯಾಯ ಸಮ್ಮತವಲ್ಲ ಎಂದು ಆಯೋಗ ತಿಳಿಸಿದೆ. ನಾನ್ ಸ್ಟ್ಯಾಂಡರ್ಡ್ ಆಧಾರದ ಮೇಲೆ ವಿಮಾ ಹಣ ರೂ.4,72,500 ಶೇ.8 ಬಡ್ಡಿಯೊಂದಿಗೆ ದೂರುದಾರರಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಸಂದಾಯ ಮಾಡುವಂತೆ ಆಯೋಗ ಆದೇಶ ನೀಡಿದೆ. ದೂರುದಾರರಿಗೆ ಆಗಿರುವ ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕಾಗಿ ರೂ.50 ಸಾವಿರ ಪರಿಹಾರ ಮತ್ತು ರೂ.10 ಸಾವಿರ ಪ್ರಕರಣದ ಖರ್ಚು ವೆಚ್ಚವನ್ನು ಕೊಡುವಂತೆ ಎದುರುದಾರ ವಿಮಾ ಕಂಪನಿಗೆ ಆಯೋಗ ಆದೇಶಿಸಿದೆ.

ಇದನ್ನೂ ಓದಿ :ಟ್ವಿಟ್ಟರ್​ಗೆ ದಂಡ ವಿಧಿಸಿದ್ದ ಏಕ ಸದಸ್ಯ ಪೀಠದ ಆದೇಶಕ್ಕೆ ಹೈಕೋರ್ಟ್ ದ್ವಿಸದಸ್ಯ ಪೀಠದಿಂದ ತಡೆ

ABOUT THE AUTHOR

...view details