ಹುಬ್ಬಳ್ಳಿ:ಕಳೆದೊಂದು ವಾರದಿಂದ ಧಾರವಾಡ ಜಿಲ್ಲೆಯ ಕೋವಿಡ್ ಪಾಸಿಟಿವಿಟಿ ದರ ಶೇ.4.1 ರ ಆಸುಪಾಸಿನಲ್ಲಿದ್ದರೂ ಅನ್ಲಾಕ್ ಆದ ಜಿಲ್ಲೆಗಳ ಪಟ್ಟಿಯಿಂದ ಹೊರಗಿಟ್ಟಿರುವುದು ಜನರ ಗೊಂದಲಕ್ಕೆ ಕಾರಣವಾಗಿದೆ. ಅನ್ಲಾಕ್ 2.0 ಘೋಷಣೆ ಮಾಡುವಾಗ ಸಿಎಂ ಬಿ.ಎಸ್ ಯಡಿಯೂರಪ್ಪ 16 ಜಿಲ್ಲೆಗಳ ಪಟ್ಟಿ ಓದಿದ್ದರು. ಅದರಲ್ಲಿ ಧಾರವಾಡ ಇರಲಿಲ್ಲ.
ಅನ್ಲಾಕ್ ಘೋಷಣೆ ಮಾಡುವಾಗ ಸಿಎಂ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದರು. ಧಾರವಾಡ ಜಿಲ್ಲೆಯಲ್ಲಿ ಸೋಂಕು ಕಡಿಮೆಯಾಗಿರುವ ಬಗ್ಗೆ ಡಿಸಿ ಸಿಎಂಗೆ ಮಾಹಿತಿ ನೀಡಿದ್ದರು. ಆದರೂ, ಸಿಎಂ ಅನ್ಲಾಕ್ ಜಿಲ್ಲೆಗಳ ಪಟ್ಟಿಯಲ್ಲಿ ಸೇರಿಸದಿರುವುದು, ಜಿಲ್ಲೆಯ ಜನ ಗೊಂದಲಕ್ಕೆ ಒಳಗಾಗುವಂತೆ ಮಾಡಿದೆ.