ಕರ್ನಾಟಕ

karnataka

ETV Bharat / state

ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ: ಸಚಿವ ಜಗದೀಶ್ ಶೆಟ್ಟರ್ - ಇಂದಿರಾ ಗಾಜಿನ ಮನೆ ಹಾಗೂ ಮಹಾತ್ಮಾ ಗಾಂಧಿ ಉದ್ಯಾನವನ

ವಾಯು ವಿಹಾರಿ ಸಂಘದ ಸದಸ್ಯರೊಂದಿಗೆ ಕಾಮಗಾರಿ ಪ್ರಗತಿ ವೀಕ್ಷಿಸಿದ ಜಗದೀಶ್​ ಶೆಟ್ಟರ್​, ಲಾಕ್​​ಡೌನ್ ನಂತರ ಎಲ್ಲಾ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಆದರೆ ಇಂದಿರಾ ಗಾಜಿನ ಮನೆ ಹಾಗೂ ಉದ್ಯಾನವನದ ಕಾಮಗಾರಿ ಮಾತ್ರ ಮಂದಗತಿಯಲ್ಲಿ‌‌ ಸಾಗುತ್ತಿದೆ ಎಂದರು.

Minister Jagdish Shettar said
ಸಚಿವ ಜಗದೀಶ್ ಶೆಟ್ಟರ್

By

Published : Mar 13, 2021, 10:45 PM IST

ಹುಬ್ಬಳ್ಳಿ: ಸ್ಮಾರ್ಟ್ ಸಿಟಿಯಡಿ ನವೀಕರಣಗೊಳ್ಳುತ್ತಿರುವ ಇಂದಿರಾ ಗಾಜಿನ ಮನೆ ಹಾಗೂ ಮಹಾತ್ಮ ಗಾಂಧಿ ಉದ್ಯಾನವನದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಈ ಹಿನ್ನೆಲೆ ಕಾಮಗಾರಿ ವೀಕ್ಷಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಉತ್ತಮ ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಸಚಿವ ಜಗದೀಶ್ ಶೆಟ್ಟರ್

ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ.. ದಿಢೀರ್‌ ಆಗಿ ಪ್ರತ್ಯಕ್ಷವಾದ ಯುವತಿ ಹೇಳಿದ್ದಿಷ್ಟೇ..

ವಾಯು ವಿಹಾರಿ ಸಂಘದ ಸದಸ್ಯರೊಂದಿಗೆ ಕಾಮಗಾರಿ ಪ್ರಗತಿ ವೀಕ್ಷಿಸಿದ ಅವರು, ಲಾಕ್​​ಡೌನ್ ನಂತರ ಎಲ್ಲಾ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಆದರೆ ಇಂದಿರಾ ಗಾಜಿನ ಮನೆ ಹಾಗೂ ಉದ್ಯಾನವನದ ಕಾಮಗಾರಿ ಮಾತ್ರ ಮಂದಗತಿಯಲ್ಲಿ‌‌ ಸಾಗುತ್ತಿದೆ. ಸಬೂಬು ಹೇಳುವುದನ್ನು ಬಿಟ್ಟು ಕೆಲಸ ನಿರ್ವಹಿಸಿ ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.

ಉದ್ಯಾನವನ ಹುಬ್ಬಳ್ಳಿ-ಧಾರವಾಡ ನಗರದ ಪ್ರಸಿದ್ಧ ಸ್ಥಳ. ಇದನ್ನು ಉಳಿಸಿಕೊಂಡು ಕಾಪಾಡಿಕೊಳ್ಳಬೇಕು. ಹೊಸದಾಗಿ ನವೀಕರಿಸಿರುವ ಕಾಮಗಾರಿಗಳು ಕಣ್ಣಿಗೆ ಗೋಚರವಾಗುತ್ತಿಲ್ಲ. ಪ್ಲೇವರ್ಸ್ ಅಳವಡಿಸಿರುವುದು ಗೊತ್ತಾಗುತ್ತಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಬೇಕು. ಉದ್ಯಾನವನ ಸಾರ್ವಜನಿಕರ ಬಳಕೆಗೆ ಮುಕ್ತವಾಗಬೇಕು ಎಂದರು.

ಸ್ಕೇಟಿಂಗ್ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಬಂದು ಅಳಲು ತೊಡಿಕೊಂಡಿದ್ದಾರೆ. ಸ್ಕೇಟಿಂಗ್‌ ಅಭ್ಯಾಸದ ಆವರಣವನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಿ, ಉದ್ಯಾನವನದ ನಿರ್ವಹಣೆ ಉತ್ತಮ ರೀತಿಯಲ್ಲಿ ಆಗಬೇಕು. ಅಧಿಕಾರಿಗಳು ಸುಲಭವಾಗಿ ಸಮಸ್ಯೆಗೆ ಇರುವ ತೊಂದರೆ ಹೇಳುತ್ತೀರಿ. ಆದರೆ ಪರಿಹಾರ ಹುಡುಕುವುದಿಲ್ಲ. ಉದ್ಯಾನವನದಲ್ಲಿ ದೊಡ್ಡದಾದ ಗಾಂಧಿ ಪ್ರತಿಮೆ ಸ್ಥಾಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ABOUT THE AUTHOR

...view details