ಕರ್ನಾಟಕ

karnataka

ETV Bharat / state

ಇಂದಿನಿಂದ ಕೋ ವ್ಯಾಕ್ಸಿನ್ ಲಸಿಕೆಯೂ ಲಭ್ಯ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ್​ - Dharwad

ಕೋ ವ್ಯಾಕ್ಸಿನ್ ಲಸಿಕೆಯೂ ಕೂಡ ಜಿಲ್ಲೆಗೆ ಬಂದಿದ್ದು, ಇಂದಿನಿಂದ ಹುಬ್ಬಳ್ಳಿಯ ಕಿಮ್ಸ್ ಹಾಗೂ ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುವುದು. ಕೋವಿಶೀಲ್ಡ್ ಅಥವಾ ಕೋ ವ್ಯಾಕ್ಸಿನ್ ಲಸಿಕೆಗಳಲ್ಲಿ ಯಾವುದಾದರೂ ಒಂದನ್ನು ನಾಗರಿಕರು ತಮ್ಮ ಇಚ್ಛೆಯನುಸಾರ ಪಡೆಯಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ್​ ತಿಳಿಸಿದರು.

DC Nitesh Patil
ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ್​

By

Published : Mar 15, 2021, 9:39 AM IST

ಧಾರವಾಡ:ಜಿಲ್ಲಾದ್ಯಂತ ಕೋವಿಡ್ ನಿಯಂತ್ರಣಕ್ಕಾಗಿ ಕಳೆದ ಜ.16 ರಿಂದ ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತಿದೆ. ಇದೀಗ ಕೋ ವ್ಯಾಕ್ಸಿನ್ ಲಸಿಕೆಯೂ ಕೂಡ ಜಿಲ್ಲೆಗೆ ಬಂದಿದ್ದು, ಇಂದಿನಿಂದ (ಮಾ.15) ಹುಬ್ಬಳ್ಳಿಯ ಕಿಮ್ಸ್ ಹಾಗೂ ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಕೋ ವ್ಯಾಕ್ಸಿನ್ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ್​ ತಿಳಿಸಿದರು.

ಈಗಾಗಲೇ ಕೋವಿಶೀಲ್ಡ್ ಲಸಿಕೆ ನೀಡುತ್ತಿರುವ ಜಿಲ್ಲೆಯ 74 ಕೇಂದ್ರಗಳಲ್ಲಿ ಎಂದಿನಂತೆ ಕಾರ್ಯನಿರ್ವಹಣೆ ನಡೆಯಲಿದೆ. ಜಿಲ್ಲೆಯ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಕೊ ಮಾರ್ಬಿಡಿಟಿ ಹೊಂದಿರುವ ವ್ಯಕ್ತಿಗಳು ಆದ್ಯತೆಯ ಮೇಲೆ ಈ ಲಸಿಕೆ ಪಡೆಯಬೇಕು ಎಂದು ಅವರು ಮನವಿ ಮಾಡಿದರು.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಗೆ 11 ಸಾವಿರ ಡೋಸ್ ಕೋ ವ್ಯಾಕ್ಸಿನ್ ಲಸಿಕೆ ಬಂದಿದೆ. ಇಂದು ಹುಬ್ಬಳ್ಳಿಯ ಕಿಮ್ಸ್ ಹಾಗೂ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಈ ಲಸಿಕೆಯನ್ನು ನೀಡಲಾಗುವುದು. ಸಾರ್ವಜನಿಕರ ಬೇಡಿಕೆ ಆಧರಿಸಿ ಉಳಿದ ಲಸಿಕಾ ಕೇಂದ್ರಗಳಿಗೂ ಕೋ ವ್ಯಾಕ್ಸಿನ್ ಲಸಿಕೆ ಪೂರೈಸಲಾಗುವುದು. ಕೋವಿಶೀಲ್ಡ್ ಲಸಿಕೆಯನ್ನು ಎಂದಿನಂತೆ ಜಿಲ್ಲೆಯ ಎಲ್ಲಾ 74 ಕೇಂದ್ರಗಳಲ್ಲಿ ಮುಂದುವರೆಸಲಾಗುವುದು. ಕೋವಿಶೀಲ್ಡ್ ಅಥವಾ ಕೋ ವ್ಯಾಕ್ಸಿನ್ ಲಸಿಕೆಗಳಲ್ಲಿ ಯಾವುದಾದರೂ ಒಂದನ್ನು ನಾಗರಿಕರು ತಮ್ಮ ಇಚ್ಛಾನುಸಾರ ಪಡೆಯಬಹುದು ಎಂದರು.

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಸಕ್ಕರೆ ಖಾಯಿಲೆ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಮತ್ತಿತರ ಕೊ ಮಾರ್ಬಿಡಿಟಿ ಲಕ್ಷಣಗಳಿರುವ 45 ರಿಂದ 59 ವರ್ಷದ ವ್ಯಕ್ತಿಗಳೂ ಕೂಡ ಲಸಿಕೆ ಪಡೆಯಬೇಕು. ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಂಡಿದೆ. ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಹತ್ತಿರದ ಸಾರ್ವಜನಿಕ ಆಸ್ಪತ್ರೆ ಅಥವಾ ನಿಗದಿತ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಉಚಿತವಾಗಿ ಲಸಿಕೆ ಪಡೆದು, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಆರೋಗ್ಯ ಪೂರ್ಣ ಜೀವನ ನಡೆಸಬೇಕು.

ಕೋವಿಶೀಲ್ಡ್ ಅಥವಾ ಕೋ ವ್ಯಾಕ್ಸಿನ್ ಇವುಗಳಲ್ಲಿ ಯಾವುದಾದರೂ ಒಂದು ಲಸಿಕೆಯನ್ನು ಒಂದು ತಿಂಗಳ ಅಂತರದಲ್ಲಿ ಎರಡು ಬಾರಿ ಹಾಕಿಸಿಕೊಳ್ಳಬೇಕು. ಕೋವಿಶೀಲ್ಡ್ 74 ಕೇಂದ್ರಗಳಲ್ಲಿ ಲಭ್ಯವಿದೆ. ಕೋ ವ್ಯಾಕ್ಸಿನ್ ಲಸಿಕೆಯು ಹುಬ್ಬಳ್ಳಿಯ ಕಿಮ್ಸ್ ಹಾಗೂ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ದೊರೆಯಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details