ಕರ್ನಾಟಕ

karnataka

ETV Bharat / state

ಯೋಗೇಶ್‌ ಗೌಡ ಹತ್ಯೆ ಪ್ರಕರಣ.. ವಿನಯ್ ವಿರುದ್ಧ ಪೂರಕ ಚಾರ್ಜ್‌ಶೀಟ್ ಸಲ್ಲಿಸಿದ ಸಿಬಿಐ.. - ಯೋಗೀಶಗೌಡ ಹತ್ಯೆ ಪ್ರಕರಣ

2020ರ ನವೆಂಬರ್ 5ರಂದು ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನಕ್ಕೊಳಗಾಗಿದ್ದರು. 90 ದಿನದೊಳಗೆ ಆರೋಪಪಟ್ಟಿ ಸಲ್ಲಿಸಬೇಕಿರುವ ಹಿನ್ನೆಲೆ ಸಿಬಿಐ ಅಧಿಕಾರಿಗಳು ಪೂರಕ ಚಾರ್ಜ್‌‌ಶೀಟ್ ಸಲ್ಲಿಸಿದ್ದಾರೆ. ಸದ್ಯ ವಿನಯ್​ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ..

Vinay Kulkarni
ವಿನಯ ಕುಲಕರ್ಣಿ

By

Published : Feb 2, 2021, 5:28 PM IST

ಧಾರವಾಡ :ಜಿಪಂ ಸದಸ್ಯ ಯೋಗೇಶ್‌ ಗೌಡ ಹತ್ಯೆ ಪ್ರಕರಣದಲ್ಲಿ ತನಿಖೆ ಕೈಗೊಂಡಿರುವ ಸಿಬಿಐ, ಮಾಜಿ ಸಚಿವ ವಿನಯ್​ ಕುಲಕರ್ಣಿ ವಿರುದ್ಧ ಪೂರಕವಾದ ಆರೋಪ ಪಟ್ಟಿ ಸಲ್ಲಿಸಿದೆ.

ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸಿಬಿಐ ಪೂರಕ ಆರೋಪ ಪಟ್ಟಿ ಸಲ್ಲಿಸಿದೆ. ಫೆ.4ರಂದು ಚಾರ್ಜ್‌ಶೀಟ್ ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಅಂದೇ ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನ ಅವಧಿ ಅಂತ್ಯಗೊಳ್ಳಲಿದೆ. ಅದೇ ದಿನ ಚಾರ್ಜ್‌ಶೀಟ್ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

2020ರ ನವೆಂಬರ್ 5ರಂದು ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನಕ್ಕೊಳಗಾಗಿದ್ದರು. 90 ದಿನದೊಳಗೆ ಆರೋಪಪಟ್ಟಿ ಸಲ್ಲಿಸಬೇಕಿರುವ ಹಿನ್ನೆಲೆ ಸಿಬಿಐ ಅಧಿಕಾರಿಗಳು ಪೂರಕ ಚಾರ್ಜ್‌‌ಶೀಟ್ ಸಲ್ಲಿಸಿದ್ದಾರೆ. ಸದ್ಯ ವಿನಯ್​ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ.

ABOUT THE AUTHOR

...view details