ಕರ್ನಾಟಕ

karnataka

ETV Bharat / state

ಸಿಡಿ ಪ್ರಕರಣ.. ಮಗಳನ್ನು ಹುಡುಕಿಕೊಡುವಂತೆ ಧಾರವಾಡ ಹೈಕೋರ್ಟ್ ಮೊರೆಹೋದ ಯುವತಿ ತಂದೆ - ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ

ಧಾರವಾಡ ಹೈಕೋರ್ಟ್​ನ ವಿಭಾಗೀಯ ಪೀಠದ ಮುಂದೆ ಸಂತ್ರಸ್ತ ಯುವತಿಯ ತಂದೆ ಪ್ರಕಾಶ ಕಂಚೇರಿ ಎಂಬುವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ಮಧ್ಯಾಹ್ನ ವಿಚಾರಣೆ ನಡೆಯಲಿದೆ..

Dharwad
ಧಾರವಾಡ ಹೈಕೋರ್ಟ್ ಮೊರೆಹೋದ ಸಿಡಿ ಯುವತಿ ತಂದೆ

By

Published : May 31, 2021, 1:50 PM IST

ಧಾರವಾಡ : ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಧಾರವಾಡ ಹೈಕೋರ್ಟ್​ಗೆ ಯುವತಿಯ ತಂದೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.

ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮಧ್ಯಾಹ್ನದ ಸುಮಾರಿಗೆ ಅರ್ಜಿ ವಿಚಾರಣೆ ನಡೆಯಲಿದೆ. ಮೇ 27 ರಂದು ಯುವತಿಯ ತಂದೆ ಮಗಳನ್ನು ಹುಡುಕಿಕೊಡಿ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಸಿಡಿ ಪ್ರಕರಣ ಬೆಳಕಿಗೆ ಬಂದ ನಂತರ ಸಂತ್ರಸ್ತೆ ಸಾಕಷ್ಟು ಸುದ್ದಿಯಲ್ಲಿದ್ದರು. ಇದೀಗ ಈ ಪ್ರಕರಣ ಮತ್ತೊಂದು ಹೊಸ ತಿರುವು ಪಡೆದಿದೆ. ತಮ್ಮ ಮಗಳು ಕಳೆದ ಕೆಲ ತಿಂಗಳಿಂದ ಕಾಣೆಯಾಗಿದ್ದು, ಆಕೆಯನ್ನು ಹುಡುಕಿಕೊಡುವಂತೆ ಯುತಿಯ ತಂದೆ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಧಾರವಾಡ ಹೈಕೋರ್ಟ್​ನ ವಿಭಾಗೀಯ ಪೀಠದ ಮುಂದೆ ಸಂತ್ರಸ್ತ ಯುವತಿಯ ತಂದೆ ಪ್ರಕಾಶ ಕಂಚೇರಿ ಎಂಬುವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ಮಧ್ಯಾಹ್ನ ವಿಚಾರಣೆ ನಡೆಯಲಿದೆ.

ಓದಿ:ಮೊದಲು ನಾನವನಲ್ಲವೆಂದು ಈಗ ನಾನೇ ಎಂದರಂತೆ.. ರಮೇಶ್‌ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್!?

ABOUT THE AUTHOR

...view details