ಕಲಘಟಗಿ (ಹುಬ್ಬಳ್ಳಿ):ಕೆವಿಜಿಬ್ಯಾಂಕ್ ಗೋಡೆ ಕೊರೆದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ತಾಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ನಡೆದಿದೆ. ಕ್ಯಾಶ್ ಕ್ಯಾಬಿನ್ ಹತ್ತಿರದ ಗೋಡೆ ಕೊರೆದು ಖದೀಮರು ಕಳ್ಳತನಕ್ಕೆ ಯತ್ನಿಸಿದ್ದಾರೆ.
ಬಳಿಕ ಒಳಬಂದ ಕಳ್ಳರು ಗ್ಯಾಸ್ ಕಟರ್ ಬಳಸಿ ಸೇಫ್ ಲಾಕರ್ ಮುರಿಯಲು ಯತ್ನಿಸಿ, ವಿಫಲರಾಗಿದ್ದಾರೆ. ನಂತರ ಬ್ಯಾಂಕ್ನಲ್ಲಿ ಅಡ್ಡಾಡಿ ಹಣಕ್ಕಾಗಿ ಹುಡುಕಾಡಿದ್ದಾರೆ. ಏನು ಸಿಗದೆ ಅಲ್ಲಿಂದ ವಾಪಸಾಗಿದ್ದಾರೆ. ಖದೀಮರ ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಜತೆಗೆ ಸಿಸಿಟಿವಿ ಕಂಡೊಡನೆ ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ.