ಹುಬ್ಬಳ್ಳಿ: ಜಿಲ್ಲೆಯ ಕುಂದಗೋಳದಿಂದ ಗುಡೇನಕಟ್ಟಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಪರಿಣಾಮ ಗ್ರಾಮಸ್ಥರು ಸಂತಸಗೊಂಡಿದ್ದಾರೆ.
ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿರುವುದರಿಂದ ಸಂತಸ ವ್ಯಕ್ತಪಡಿಸಿದ ಜನ ವಾಯುವ್ಯ ಸಾರಿಗೆ ಸಂಸ್ಥೆ ಹಿರಿಯ ಅಧಿಕಾರಿಗಳು ಇಂದು ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಕುಂದಗೋಳದಿಂದ ಗುಡೇನಕಟ್ಟಿ, ನಾಗರಹಳ್ಳಿ, ಮಂಟೂರು, ಬಂಡಿವಾಡ, ಶಿರಗುಪ್ಪಿ, ನಲವಡಿ ಮಾರ್ಗವಾಗಿ ಗದಗ ಮತ್ತು ನವಲಗುಂದಕ್ಕೆ ಹೋಗುವ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ.
ಗ್ರಾಮಸ್ಥ ಬಸವರಾಜ್ ಯೋಗಪ್ಪನವರ್ ಮಾತ.ನಾಡಿ, ಇನ್ನು ಮುಂದೆ ಪ್ರಯಾಣಿಕರು ಖಾಸಗಿ ವಾಹನಗಳನ್ನು ಬಿಟ್ಟು, ಸರ್ಕಾರಿ ಸಾರಿಗೆ ಸಂಸ್ಥೆಗಳ ಬಸ್ನಲ್ಲಿ ಪ್ರಯಾಣಿಸಬೇಕು ಎಂದು ಮನವಿ ಮಾಡಿಕೊಂಡರು
ಈ ಸಂದರ್ಭದಲ್ಲಿ ಹುಬ್ಬಳ್ಳಿ ಕೆಎಸ್ಆರ್ಟಿಸಿ ಅಧಿಕಾರಿಗಳು ಹಾಗೂ ಗದಗ ಹಿರಿಯ ಅಧಿಕಾರಿಗಳು, ಸಂಸ್ಥೆಯ ನಿರ್ದೇಶಕ ಅಶೋಕ್ ಮಳಗಿ, ಗ್ರಾಮ ಪಂಚಾಯತ್ ಮಲ್ಲಿಕಾರ್ಜುನ್, ಸೊರಟೂರ್ ಗುರುಪಾದಪ್ಪ, ಹೊಸಳ್ಳಿ ಧನಪಾಲ್, ಜೈಪಾಲ್, ಯೋಗಪ್ಪನವರ್, ಚನ್ನಬಸಪ್ಪ ಸಿದ್ದು, ಚೆನ್ನವೀರ ಸ್ವಾಮಿ ಹಿರೇಮಠ ಹಾಗೂ ಗ್ರಾಮಸ್ಥರು ಇದ್ದರು.
ಓದಿ:ಚಿಕ್ಕಬಳ್ಳಾಪುರ: ಅಂಗನವಾಡಿ ಕೇಂದ್ರದಲ್ಲಿ ಕೇಕ್ ಕತ್ತರಿಸಿ ಮಕ್ಕಳನ್ನು ಸ್ವಾಗತಿಸಿದ ಡಿಸಿ