ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರದ ಅಧಿಕಾರಾವಧಿ ಕುರಿತು ಕೋಡಿಮಠದ ಸ್ವಾಮೀಜಿ ನುಡಿದ್ರು ಈ ಭವಿಷ್ಯ - ಹುಬ್ಬಳ್ಳಿ ಸುದ್ದಿ

ರಾಜ್ಯ ರಾಜಕಾರಣದಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆಗಳು ಇಲ್ಲ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ತನ್ನ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಲಿದ್ದು, ಯಡಿಯೂರಪ್ಪ ಸರ್ಕಾರ ಸುರಕ್ಷಿತ ಎಂದು ಕೋಡಿಮಠದ ಶಿವಾನಂದ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

kodimatha-swamiji
kodimatha-swamiji

By

Published : Feb 5, 2020, 3:33 PM IST

Updated : Feb 5, 2020, 3:51 PM IST

ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆಗಳು ಇಲ್ಲ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ತನ್ನ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಲಿದ್ದು,ಯಡಿಯೂರಪ್ಪ ಸರ್ಕಾರ ಸೇಫ್ ಎಂದು ಕೋಡಿಮಠದ ಶಿವಾನಂದ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಕೋಡಿಮಠದ ಸ್ವಾಮೀಜಿ ಭವಿಷ್ಯ

ನಗರದಲ್ಲಿಂದು‌ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ರಾಜ್ಯ ರಾಜಕೀಯದಲ್ಲಿ ಯಾವುದೇ ತೊಂದರೆ ಇಲ್ಲ, ಎಲ್ಲವೂ ಸರಿಯಾಗಲಿದೆ. ಯಡಿಯೂರಪ್ಪ ಸರ್ಕಾರಕ್ಕೆ ಸದ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ. ಯುಗಾದಿವರೆಗೆ ಸುಸೂತ್ರವಾಗಿ ನಡೆಯಲಿದೆ. ಯುಗಾದಿ ನಂತರ ಮತ್ತೆ ಏನೆಂಬುದನ್ನು ತಿಳಿಸುವೆ ಎಂದು ಅವರು ಹೇಳಿದರು. ಯಾರೇ ಸಚಿವ ಸ್ಥಾನಕ್ಕೆ ಒತ್ತಾಯಿಸುತ್ತಿದ್ದರೂ ಬಿಎಸ್ ಯಡಿಯೂರಪ್ಪ ಸರ್ಕಾರಕ್ಕೆ ತೊಂದರೆಯಿಲ್ಲ ಎಂದು ಸ್ವಾಮೀಜಿ ಭವಿಷ್ಯ ನುಡಿದರು.

ಈ ವರ್ಷ ಇನ್ನೂ ಹೆಚ್ಚಿನ ಮಳೆಯಾಗುವ ಸೂಚನೆಯಿದೆ.ಈ ವರ್ಷ ಬೆಂಕಿಯ ಆಪತ್ತು ಸಂಭವಿಸಲಿದೆ, ಮತ್ತೆ ಜಲಕಂಟಕ ಎದುರಾಗಲಿದೆ ಎಂದ ಅವರು,ಇನ್ನೂ ಹೊಸ ಹೊಸ ರೋಗಗಳು ಉದ್ಭಸಲಿವೆ ಎಂದು ಅವರು ಸೂಚನೆ ನೀಡಿದರು. ರಾಮ ಮಂದಿರ ನಿರ್ಮಾಣದ ಕುರಿತು ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ದೇಶ ಆಳುವ ರಾಜನ ಕರ್ತವ್ಯ. ಅದು ಬಹುಸಂಖ್ಯಾತರ ಅಪೇಕ್ಷೆ ಕೂಡ ರಾಮಮಂದಿರ ನಿರ್ಮಾಣವಾಗುತ್ತೇ ಎಂದರು. ಸಿಎಎ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು‌ ನಿರಾಕರಿಸಿದರು.

Last Updated : Feb 5, 2020, 3:51 PM IST

ABOUT THE AUTHOR

...view details