ಕರ್ನಾಟಕ

karnataka

ETV Bharat / state

ಎಂ ಬಿ ಪಾಟೀಲ ಭೇಟಿ ಹಿನ್ನೆಲೆ ಸಾವರ್ಕರ್​​ ಬ್ಯಾನರ್​ ಹಾಕಿದ ಬಿಜೆಪಿ ಕಾರ್ಯಕರ್ತರು ಪೊಲೀಸ್​ ವಶಕ್ಕೆ - ಬಿಜೆಪಿ ಕಾರ್ಯಕರ್ತರು ಪೊಲೀಸ್​ ವಶಕ್ಕೆ

ಧಾರವಾಡದ ಮುರುಘಾ ಮಠಕ್ಕೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ ಭೇಟಿ ನೀಡುವ ಹಿನ್ನೆಲೆ ವೀರ ಸಾವರ್ಕರ್ ಬ್ಯಾನರ್​​ ಅಳವಡಿಸಿ, ಪ್ರತಿಭಟನೆಗೆ ಸಜ್ಜಾಗಿದ್ದ ಬಿಜೆಪಿ ಹಾಗೂ ಬಜರಂಗದಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

bjp-activists-put-savarkar-banner-in-dharwad
ಎಂಬಿ ಪಾಟೀಲ ಹುಬ್ಬಳ್ಳಿ ಭೇಟಿ: ಸಾವರ್ಕರ್​​ ಬ್ಯಾನರ್​ ಹಾಕಿದ ಬಿಜೆಪಿ ಕಾರ್ಯಕರ್ತರು

By

Published : Aug 20, 2022, 5:17 PM IST

ಧಾರವಾಡ:ರಾಜ್ಯದ ಹಲವೆಡೆ ಬಿಜೆಪಿ ಹಾಗೂ ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಬ್ಯಾನರ್​, ಫ್ಲೆಕ್ಸ್​ ಗಲಾಟೆಗಳು ಮುಂದುವರೆದಿದೆ. ಧಾರವಾಡದ ಮುರುಘಾ ಮಠಕ್ಕೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ ಭೇಟಿ ಹಿನ್ನೆಲೆಯಲ್ಲಿ ವೀರ ಸಾವರ್ಕರ್ ಬ್ಯಾನರ್​​ ಅಳವಡಿಸಿ, ಕಪ್ಪುಪಟ್ಟಿ ಸ್ವಾಗತ ಕೋರಲು ಸಜ್ಜಾಗಿದ್ದ ಬಿಜೆಪಿ ಹಾಗೂ ಬಜರಂಗದಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿಯಿಂದ ಧಾರವಾಡದ ಮುರುಘಾ ಮಠಕ್ಕೆ ಎಂ.ಬಿ. ಪಾಟೀಲ ಅವರು ಇಂದು ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳಿಂದ ಬ್ಯಾನರ್​​ ಹಾಕಲಾಗಿದ್ದು, ಅದರ ಪಕ್ಕದಲ್ಲಿಯೇ ಸಾವರ್ಕರ್ ಇರುವ ಬ್ಯಾನರ್​​ ಅಳವಡಿಸಿದ್ದರು. ಪೊಲೀಸ್ ಬ್ಯಾರಿಕೇಡ್​ಗೆ ಸಾವರ್ಕರ್​ ಬ್ಯಾನರ್​​ ಕಟ್ಟಲಾಗಿತ್ತು. ಎಂ ಬಿ ಪಾಟೀಲ ವಿರುದ್ಧ ಧಿಕ್ಕಾರ ಕೂಗಲು ಮುಂದಾಗಿದ್ದ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.

ಶುಕ್ರವಾರ ಕಾಂಗ್ರೆಸ್ ಪ್ರತಿಭಟನೆ ವೇಳೆ ಸಾವರ್ಕರ್ ಅವರ ಭಾವಚಿತ್ರ ದಹಿಸಿದ ಪ್ರಕರಣದಲ್ಲಿ 12 ಮಂದಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ಬ್ಯಾನರ್​ ಸಂಘರ್ಷ ಮುಂದುವರೆದಿದೆ. ಇಂದು ಬೆಳಗ್ಗೆ ಹುಬ್ಬಳ್ಳಿಯಲ್ಲಿ ಕೂಡ ಎಂ ಬಿ ಪಾಟೀಲ್ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಧಾರವಾಡ ಜಿಲ್ಲಾಧ್ಯಕ್ಷ ಸಂಜೀವ್ ಕಪಾಟಕರ್ ಸೇರಿದಂತೆ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ:ಸಾವರ್ಕರ್ ಫೋಟೋ ಸುಟ್ಟ ಪ್ರಕರಣ: ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೂರು ದಾಖಲು

ABOUT THE AUTHOR

...view details