ಧಾರವಾಡ: ಕಾರು ಅಪಘಾತದಲ್ಲಿ ಕುಂದಗೋಳದ ಶ್ರೀ ಬಸವೇಶ್ವರ ಸ್ವಾಮೀಜಿ ಮೃತಪಟ್ಟ ಹಿನ್ನೆಲೆ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದರು.
ಅಶೋಕ್ ಖೇಣಿಗೆ ಮನುಷ್ಯತ್ವವೇ ಇಲ್ಲ: ಮಾಜಿ ಸಭಾಪತಿ ಬಸವರಾಜ ಹೊರಟ್ಟಿ
ಕಾರು ಅಪಘಾತದಲ್ಲಿ ಕುಂದಗೋಳದ ಶ್ರೀ ಬಸವೇಶ್ವರ ಸ್ವಾಮೀಜಿ ಮೃತಪಟ್ಟ ಹಿನ್ನೆಲೆ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು,ಸ್ವಾಮೀಜಿ ಬಹಳ ಜನಪ್ರಿಯ ಶಿಕ್ಷಣ ಪ್ರೇಮಿಗಳಾಗಿದ್ದರು. ಅವರು ಮೃತಪಟ್ಟಿದ್ದು ದುರ್ದೈವದ ಸಂಗತಿಯಾಗಿದೆ ಎಂದರು. ಸ್ವಾಮೀಜಿಯವರ ಕಾರು ಅಪಘಾತವಾದ ಕೆಲವೇ ಕ್ಷಣಗಳ ಮೊದಲು ನಾನು ಅಲ್ಲಿದ್ದೆ. ಬೆಂಗಳೂರಿಂದ ಮುಂಬೈಗೆ ಒಂದೇ ಹೈವೇ ಇದ್ದು, ಇಷ್ಟೆಲ್ಲಾ ಅಪಘಾತಗಳು ಸಂಭವಿಸಿದ್ರೂ ಸಹ ಬೈಪಾಸ್ನ್ನು ಪೋರ್ ಲೈನ್ ಮಾಡಲಾಗಿಲ್ಲ ಎಂದರು. ಅಶೋಕ್ ಖೇಣಿಯ ಗುತ್ತಿಗೆಯಲ್ಲಿ ಈ ಬೈಪಾಸ್ಯಿದ್ದು, ಈ ಬೈಪಾಸ್ನ್ನು ಫೋರ್ ಲೈನ್ ಮಾಡಿದ್ರೇ, ಅಪಘಾತಗಳು ಕಡಿಮೆಯಾಗಲಿವೆ. ಅಶೋಕ ಖೇಣಿಗೆ ಮನುಷ್ಯತ್ವವೇ ಇಲ್ಲ ಎಂದರು.
ಈ ವಿಚಾರವಾಗಿ ಸದನದಲ್ಲಿ ಚರ್ಚೆ ಮಾಡುತ್ತೇನೆ. ಒಟ್ಟಾರೆ ಮೂರು ವರ್ಷದಲ್ಲಿ ನಾಲ್ಕು ನೂರು ಜನರು ಅಪಘಾತದಿಂದ ಮೃತಪಟ್ಟಿದ್ದಾರೆ. ಈ ಕುರಿತು ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕಿದೆ ಎಂದು ಆಗ್ರಹಿಸಿದರು.