ಕರ್ನಾಟಕ

karnataka

ETV Bharat / state

ಮನೆಯಿಂದ ಹೊರ ಬರಬೇಡಿ ಎಂದು ಶಿಕ್ಷಕರಲ್ಲಿ ಮನವಿ ಮಾಡಿದ ಬಸವರಾಜ ಹೊರಟ್ಟಿ - basavaraja horatti requests teachers not to come out

ದಯವಿಟ್ಟು ಮನೆಯಿಂದ ಹೊರ ಬರಬೇಡಿ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ರಾಜ್ಯದ ಶಿಕ್ಷಕರಲ್ಲಿ ಮನವಿ ಮಾಡಿದ್ದಾರೆ. ಮಾಧ್ಯಮ ಪ್ರಕಟಣೆ ಮೂಲಕ ಹೊರಟ್ಟಿ ಈ ಮನವಿ ಮಾಡಿದ್ದಾರೆ.

horatti
horatti

By

Published : Mar 26, 2020, 2:02 PM IST

ಹುಬ್ಬಳ್ಳಿ:ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಲಾಕ್​ಡೌನ್ ಆಗಿರುವುದರಿಂದ ರಾಜ್ಯದ ಶಿಕ್ಷಕರಿಗೆ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ದಯವಿಟ್ಟು ಮನೆಯಿಂದ ಹೊರ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ ಅವರು ಶಿಕ್ಷಕರು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು, ನೀವು ಸರಕಾರದ ಆದೇಶ ಪಾಲಿಸಿ. ವಿದ್ಯಾರ್ಥಿಗಳಿಗೂ ಈ ಬಗ್ಗೆ ತಿಳಿ ಹೇಳಿ, ವಿದ್ಯಾರ್ಥಿಗಳ ಪೋಷಕರಿಗೂ ಮನವಿ ಮಾಡಿಕೊಳ್ಳಿ. ಆ‌ ಮೂಲಕ ಕೊರೊನಾ ಹಿಮ್ಮೆಟ್ಟಿಸೋ ಕೆಲಸ ಮಾಡಿ ಎಂದು ಶಿಕ್ಷಕರಿಗೆ ಮನವಿ ಮಾಡಿಕೊಂಡಿದ್ದಾರೆ.

ಬಸವರಾಜ ಹೊರಟ್ಟಿ ಮಾಧ್ಯಮ ಪ್ರಕಟಣೆ

ಅನೇಕ ದೇಶಗಳು ಕೊರೊನಾ ಮುಂದೆ ಕೈ ಚೆಲ್ಲಿ ಕೂತಿವೆ, ನಾವು ಹಾಗಾಗದಂತೆ ಮಾಡಬೇಕಿದೆ. ಅದರಲ್ಲಿ‌ ನಿಮ್ಮ ಪಾತ್ರ ಬಲು ಮುಖ್ಯ.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಎಂದು ನಾಡಿನ ಶಿಕ್ಷಕ ವೃಂದಕ್ಕೆ ಮಾಧ್ಯಮ ಪ್ರಕಟಣೆ ಮೂಲಕ ಬಸವರಾಜ ಹೊರಟ್ಟಿ ಮನವಿ ಮಾಡಿದ್ದಾರೆ.

ABOUT THE AUTHOR

...view details