ಕರ್ನಾಟಕ

karnataka

ETV Bharat / state

ಹುಬ್ಬಳಿಯಲ್ಲಿ ರಾರಾಜಿಸಿವೆ ಪ್ರಧಾನಿ ವಿರುದ್ಧದ ಬ್ಯಾನರ್​ಗಳು: ಯಾಕೆ ಗೊತ್ತಾ..!?

ಮಳೆಯ ಆರ್ಭಟಕ್ಕೆ ಸಂಪೂರ್ಣ ಉತ್ತರ ಕರ್ನಾಟಕ ನಲುಗಿ ಹೋಗಿದ್ದರು ಪ್ರಧಾನಿ ಮೋದಿ ನಮ್ಮ ಕಷ್ಟಕ್ಕೆ ಸ್ಪಂದಿಸದೇ ವಿದೇಶಿ ಪ್ರವಾಸದಲ್ಲಿದ್ದು, ನಾಳೆ ರಾಜ್ಯಕ್ಕೆ ಬರ್ತಿದ್ದಾರೆ ಎಂದು ನಗರದಲ್ಲಿ ಹಲವು ಬ್ಯಾನರ್​ಗಳನ್ನು ಹಾಕುವ ಮೂಲಕ ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಹುಬ್ಬಳಿಯಲ್ಲಿ ರಾರಾಜಿಸಿವೆ ಪ್ರಧಾನಿ ವಿರುದ್ಧದ ಬ್ಯಾನರ್​ಗಳು: ಯಾಕೆ ಗೊತ್ತಾ..!?

By

Published : Sep 5, 2019, 10:13 PM IST

ಹುಬ್ಬಳ್ಳಿ: ಎರಡನೇ ಬಾರಿಗೆ ದೇಶದ ಗದ್ದುಗೆ ಏರಿರುವ ಪ್ರಧಾನಿ ಮೋದಿ ಪ್ರವಾಹದ ವೇಳೆ ಮಾತ್ರ ಸ್ಪಂದಿಸಲಿಲ್ಲ. ಯಾವುದೇ ಜನಪರ ಕೆಲಸ ಮಾಡದೇ ತಿರುಗಾಡುತ್ತಿದ್ದಾರೆ ಎಂದು ಪ್ರಧಾನಿಗೆ ಸ್ವಾಗತ ಕೋರುವ ಬ್ಯಾನರ್ ಹುಬ್ಬಳ್ಳಿ ಯಲ್ಲಿ ಸದ್ದು ಮಾಡಿದೆ.

ಹುಬ್ಬಳಿಯಲ್ಲಿ ರಾರಾಜಿಸಿವೆ ಪ್ರಧಾನಿ ವಿರುದ್ಧದ ಬ್ಯಾನರ್​ಗಳು: ಯಾಕೆ ಗೊತ್ತಾ..!?

ಹೌದು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಯಲ್ಲಿ ಆವರಿಸಿದ ಕುಂಭದ್ರೋಣ ಮಳೆಗೆ ಸಂಪೂರ್ಣ ಉತ್ತರ ಕರ್ನಾಟಕ ನಲುಗಿ ಹೋಗಿತ್ತು. ಲಕ್ಷಾಂತರ ಜನ ಮನೆ ಮಠ ಕಳೆದುಕೊಂಡು ಬೀದಿ ಪಾಲಾಗಿದ್ದರು. ಜನರ ಕಷ್ಟ ಕಂಡು ಇಡೀ ರಾಷ್ಟ್ರವೇ ಮರುಗಿತ್ತು. ಅಲ್ಲದೇ ಸಹಾಯ ಹಸ್ತ ಕೂಡ ಸಾಗರದಂತೆ ಹರಿದು ಬಂದಿತ್ತು. ಆದರೆ, ಈ ದೇಶದ ಪ್ರಧಾನಿಯಾಗಿರುವ ಮೋದಿ‌ ಮಾತ್ರ ಇತ್ತ ಕಣ್ಣೆತ್ತಿ ಕೂಡ ನೋಡಿಲ್ಲ. ಕೊನೆಯದಾಗಿ ಒಂದು ಸಣ್ಣ ಟ್ವೀಟ್ ಕೂಡ ಮಾಡಿಲ್ಲ. ಕೇಂದ್ರದ ನಾಯಕರು ಬಂದು ಹೋದ್ರೂ ಕೂಡ ಮೋದಿ ಮಾತ್ರ ಕರ್ನಾಟಕಕ್ಕೆ ಹೆಜ್ಜೆನೇ ಇಡಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಇಷ್ಟೆಲ್ಲಾ ನಡೆದು ತಿಂಗಳು ಕಳೆದರೂ ಕೂಡ ಪ್ರಧಾನಿ ಮೋದಿ ಮಾತ್ರ ವಿದೇಶಿ ಪ್ರವಾಸದಲ್ಲಿದ್ದು, ನಾಳೆ ರಾಜ್ಯಕ್ಕೆ ಬರ್ತಿದ್ದಾರೆ. ಅದು ಚಂದ್ರಯಾನ ೨ ವೀಕ್ಷಿಸಲು ಬರುತ್ತಿದ್ದಾರೆಯೇ ಹೊರತು ನೆರೆಯ ಪ್ರದೇಶ ವೀಕ್ಷಿಸಲು ಬರುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿರುವ ಹುಬ್ಬಳ್ಳಿ ಜನತೆ, ಚೆನ್ನಮ್ಮ ವೃತ್ತದಲ್ಲಿ ನೆರೆಪೀಡಿತರ ಚಿತ್ರ ಹೊಂದಿದ ಬೃಹತ್‌ ಕಟೌಟ್ ಪ್ರಧಾನಿ ಮೋದಿಯವರ ಸ್ವಾಗತ ಮಾಡುತ್ತಿವೆ. ಇನ್ನೂ ಈ ಕಟೌಟ್​ಗಳನ್ನು ಕೆಲವೇ ಗಂಟೆಗಳಲ್ಲಿ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಈ ಬ್ಯಾನರ್ ಮೂಲಕವಾದ್ರು ಪ್ರಧಾನಿ ಬರ್ತಾರಾ ಅಂತಾ ನಿರೀಕ್ಷೆಯಲ್ಲಿ ಜನ ಈ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details