ಕರ್ನಾಟಕ

karnataka

ETV Bharat / state

ಪ್ರಯಾಣಿಕ ಮರೆತು ಹೋದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಹುಬ್ಬಳ್ಳಿಯ ರಿಕ್ಷಾ ಚಾಲಕ

ಪ್ರಯಾಣಿಕರೊಬ್ಬರು ಬಿಟ್ಟು ಹೋದ ಬ್ಯಾಗನ್ನು ಪೊಲೀಸರ ಮೂಲಕ ಹಿಂತಿರುಗಿಸಿ ಆಟೋ ಚಾಲಕ ಪ್ರಾಮಾಣಿಕತೆ ಮೆರದಿದ್ದಾನೆ.

Etv Bharatauto-driver-has-handover-the-gold-to-passenger-who-lost
ಆಟೋ ಚಾಲಕನ ಪ್ರಾಮಾಣಿಕತೆ

By

Published : Dec 12, 2022, 11:18 AM IST

ಆಟೋದಲ್ಲಿ ಬ್ಯಾಗ್ ಮರೆತು ಹೋದ ಪ್ರಯಾಣಿಕನ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

ಹುಬ್ಬಳ್ಳಿ:ಆಟೋ ಚಾಲಕರು ಎಂದರೇ ಸ್ವಲ್ಪ ದೂರ ಸಂಚಾರ ಮಾಡಲು ಸಾಕಷ್ಟು ದುಡ್ಡು ಕೇಳುತ್ತಾರೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುವುದು ಸಹಜ. ಆದರೆ ಖಾಕಿ ತೊಟ್ಟು ಆಟೋ ಚಾಲನೆ ಮಾಡುವ ಚಾಲಕರಲ್ಲಿಯೂ ಒಬ್ಬ ಸಹೃದಯಿ ಸೇವಕ ಇರುತ್ತಾನೆ ಎಂಬ ಮಾತು ಸಹ ಅಕ್ಷರಶಃ ಸತ್ಯ.

ಚೆನ್ನಮ್ಮ ವೃತ್ತದಿಂದ ಆಟೋ ಹತ್ತಿದ ಪ್ರಯಾಣಿಕರು ಅರವಿಂದನಗರದಲ್ಲಿ ಇಳಿಯುವಾಗ ತಮ್ಮ ಬ್ಯಾಗವೊಂದನ್ನು ಬಿಟ್ಟು ಹೋಗಿದ್ದರು. ಬ್ಯಾಗಿನಲ್ಲಿ ಲಕ್ಷಾಂತರ ಮೌಲ್ಯದ ಆಭರಣಗಳು ಕೂಡ ಇದ್ದವು. ಇದೇ ವೇಳೆ ಹಿಂದಿನ ಆಸನದಲ್ಲಿದ್ದ ಪ್ರಯಾಣಿಕರ ಬ್ಯಾಗ್ ಗಮನಿಸಿದ ಆಟೋ ಚಾಲಕ ರಾಜು ಬಿಂಗೆ ಪ್ರಾಮಾಣಿಕವಾಗಿ ಬ್ಯಾಗ್ ಜೊತೆಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ಆಗ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಶೋಕ್​ ಚವ್ಹಾಣ ನೇತೃತ್ವದಲ್ಲಿ ಪ್ರಯಾಣಿಕರಿಗೆ ಬ್ಯಾಗ್ ಮರಳಿಸುವ ಮೂಲಕ ಆಟೋ ಚಾಲಕ ರಾಜು ಬಿಂಗೆ ಪ್ರಾಮಾಣಿಕತೆ ಮೆರೆದಿದ್ದಾರೆ.

ಇನ್ನು, ಪ್ರಾಮಾಣಿಕತೆ ತೋರಿದ ಆಟೋ ಚಾಲಕನಿಗೆ ಪೊಲೀಸ್ ಇನ್ಸ್ಪೆಕ್ಟರ್ ಅಶೋಕ್​ ಚವ್ಹಾಣ ಹಾಗೂ ಸಿಬ್ಬಂದಿ ಠಾಣೆಯಲ್ಲಿಯೇ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಚಿನ್ನಾಭರಣ ಕಳೆದುಕೊಂಡಿದ್ದ ಮಹಿಳೆ: ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ABOUT THE AUTHOR

...view details