ಧಾರವಾಡ:ಕ್ಷುಲ್ಲಕ ಕಾರಣಕ್ಕೆ ವಕೀಲನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ.
ನ್ಯಾಯವಾದಿ ಮೇಲೆ ಹಲ್ಲೆ... ರಸ್ತೆ ತಡೆದು ವಕೀಲರಿಂದ ಪ್ರತಿಭಟನೆ - ವಕೀಲ
ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ವಕೀಲರೊಬ್ಬರ ಮೇಲೆ ಹಲ್ಲೆ ಮಾಡಿದ್ದು, ಹಲ್ಲೆ ಖಂಡಿಸಿ ಧಾರವಾಡದಲ್ಲಿ ವಕೀಲರು ಪ್ರತಿಭಟನೆ ನಡೆಸಿದರು.
ರಸ್ತೆ ತಡೆದು ವಕೀಲರಿಂದ ಪ್ರತಿಭಟನೆ
ರಾಜು ದೇಸಾಯಿ ಎಂಬ ವ್ಯಕ್ತಿ ನ್ಯಾಯವಾದಿ ರಾಜು ಠಾಕೂರ್ ಮೇಲೆ ಹಲ್ಲೆ ಮಾಡಿದ್ದಾನೆ. ನಿನ್ನೆ ತಡರಾತ್ರಿ ರಾಜು ಠಾಕೂರ್ ತಮ್ಮ ಮನೆಯ ಹೊರಗಡೆ ನಿಂತಾಗ ಕುಡಿದ ಅಮಲಿನಲ್ಲಿದ್ದ ರಾಜು ದೇಸಾಯಿ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಕುಪಿತಗೊಂಡ ದೇಸಾಯಿ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಿಲಾಗಿದೆ.
ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯನ್ನು ಖಂಡಿಸಿ ವಕೀಲರ ಸಂಘದಿಂದ ನಗರದ ಜ್ಯುಬಿಲಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.