ಕರ್ನಾಟಕ

karnataka

ETV Bharat / state

ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯತಿ ಸದಸ್ಯೆ ಮೇಲೆ ಹಲ್ಲೆ - ಹಲ್ಲೆ

10 ದಿನಕ್ಕೆ ಒಂದು ಸಾರಿ ಕುಡಿಯುವ ನೀರು ಸರಬರಾಜು ಮಾಡುತಿದ್ದು, ಅದನ್ನೂ ಸಹ ಸಮರ್ಪಕವಾಗಿ ಬಿಡುತ್ತಿರಲಿಲ್ಲ ಎಂದು ಆರೋಪಿಸಿದ ಸಾರ್ವಜನಿಕರು ಗ್ರಾಮ ಪಂಚಾಯತಿ ಸದಸ್ಯೆಯೊಬ್ಬರ ಮೇಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ಗ್ರಾಮ ಪಂಚಾಯತಿ ಸದಸ್ಯೆ ನೀಲವ್ವ ಅದರಗುಂಚಿ

By

Published : Mar 5, 2019, 1:39 PM IST

ಹುಬ್ಬಳ್ಳಿ: ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಸಾರ್ವಜನಿಕರು ಗ್ರಾಮ ಪಂಚಾಯತಿ ಸದಸ್ಯೆಯೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಕುಂದಗೋಳ ತಾಲೂಕಿನ ಬೆಟ್ಟದೂರ ಗ್ರಾಮದಲ್ಲಿ ನಡೆದಿದೆ.

ಹಲ್ಲೆಗೊಳಗಾದ ಗ್ರಾಮ ಪಂಚಾಯತಿ ಸದಸ್ಯೆ ನೀಲವ್ವ ಅದರಗುಂಚಿ

ನೀಲವ್ವ ಅದರಗುಂಚಿ ಹಲ್ಲೆಗೊಳಗಾದ ಪಂಚಾಯತಿ ಸದಸ್ಯೆ ಎಂದು ತಿಳಿದು ಬಂದಿದೆ. ಅಧಿಕಾರಿಗಳು 10 ದಿನಕ್ಕೆ ಒಂದು ಸಾರಿ ಕುಡಿಯುವ ನೀರು ಸರಬರಾಜು ಮಾಡುತಿದ್ದು, ಅದನ್ನೂ ಸಹ ಸಮರ್ಪಕವಾಗಿ ಬಿಡುತ್ತಿರಲಿಲ್ಲ ಎಂದು ಆರೋಪಿಸಿದ ಸಾರ್ವಜನಿಕರು, ಬೆಟದೂರು ಗ್ರಾಮ ಪಂಚಾಯತಿ ಸದಸ್ಯೆ ನೀಲವ್ವ ಅದರಗುಂಚಿ ಅವರ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ.

ಹಲ್ಲೆಗೊಳಗಾದ ಗ್ರಾಮ ಪಂಚಾಯತಿ ಸದಸ್ಯೆ ನೀಲವ್ವ ಅದರಗುಂಚಿ

ಗ್ರಾಮಸ್ಥರು ಹಾಗೂ ನೀಲವ್ವ ಅವರ ನಡುವೆ ಮಾತಿಗೆ ಮಾತು ಬೆಳೆದು ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ. ಮಂಜು ಬಾಲನಾಯ್ಕರ್, ಶಿವಪ್ಪ ತಳವಾರ ಸೇರಿದಂತೆ ಇತರರು ಹಲ್ಲೆ ಮಾಡಿದ್ದು, ನೀಲವ್ವ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಲ್ಲದೆ ಕೋಪದಲ್ಲಿದ್ದ ಜನರು ಮನೆಯ ಹೆಂಚುಗಳನ್ನು ಒಡೆದು ಹಾನಿಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕುಂದಗೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.

ABOUT THE AUTHOR

...view details