ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡ ಮೂಕ ಪ್ರಾಣಿಗಳು

ಕೊರೊನಾ ಭೀತಿ ಮನುಷ್ಯನಿಗಷ್ಟೇ ಅಲ್ಲದೆ ನಾಯಿಗಳಿಗೂ ಮೂಡಿದೆ ಅನಿಸುತ್ತದೆ. ಹಾಗಾಗಿ ಮೂಕ ಪ್ರಾಣಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮನುಷ್ಯನಿಗೆ ಹೊಸ ಸಂದೇಶ ರವಾನಿಸಿವೆ.

ಸಾಮಾಜಿಕ ಅಂತರ ಕಾಯ್ದುಕೊಂಡ ಮೂಕ ಪ್ರಾಣಿಗಳು
ಸಾಮಾಜಿಕ ಅಂತರ ಕಾಯ್ದುಕೊಂಡ ಮೂಕ ಪ್ರಾಣಿಗಳು

By

Published : Apr 2, 2020, 5:04 PM IST

ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲಿ ಎಂದು ದೇಶವನ್ನೇ ಲಾಕ್​​ಡೌನ್ ಮಾಡಲಾಗಿದೆ. ಆದರೆ ಜನರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಬದಲಿಗೆ ಮೂಕ ಪ್ರಾಣಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮನುಷ್ಯನಿಗೆ ಹೊಸ ಸಂದೇಶ ರವಾನಿಸಿವೆ.

ಹೌದು, ಕೊರೊನಾ ಭೀತಿ ಮನುಷ್ಯನಿಗಷ್ಟೇ ಅಲ್ಲದೆ ನಾಯಿಗಳಿಗೂ ಮೂಡಿದೆ ಅನಿಸುತ್ತದೆ. ಹಾಗಾಗಿ ಹುಬ್ಬಳ್ಳಿಯ ನೈರುತ್ಯ ರೈಲ್ವೆ ನಿಲ್ದಾಣದಲ್ಲಿ ನಾಯಿಗಳು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದು, ಸಾರ್ವಜನಿಕರಿಗೆ ಮೂಕ ಪ್ರಾಣಿಗಳು ಸಂದೇಶ ಸಾರಿವೆ.

ABOUT THE AUTHOR

...view details