ಹುಬ್ಬಳ್ಳಿ: ದೇಶಪಾಂಡೆ ಫೌಂಡೇಶನ್ ವತಿಯಿಂದ ಫೆ.11ರಂದು ಆಯೋಜಿಸಲಾಗಿರುವ ವೆಬಿನಾರ್ನಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಅವರು ಕೂಡ ಭಾಗವಹಿಸಿ People Movement for Rural Development(ಗ್ರಾಮೀಣಾಭಿವೃದ್ಧಿಗಾಗಿ ಜನರ ಚಳವಳಿ) ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ ಎಂದು ದೇಶಪಾಂಡೆ ಫೌಂಡೇಶನ್ ಸಿಇಒ ವಿವೇಕ್ ಪವಾರ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಫೆಬ್ರವರಿ 11ರಂದು ಸಂಜೆ 6ಗಂಟೆಗೆ ವೆಬ್ನಾರ್ ನಡೆಯಲಿದ್ದು, ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕ ಡಾ.ಗುರುರಾಜ್ ದೇಶಪಾಂಡೆ, ಪಾನಿ ಫೌಂಡೇಶನ್ ಸಹ-ಸಂಸ್ಥಾಪಕರಾಗಿರುವ ಖಾನ್ ಮತ್ತು ಅವರ ಪತ್ನಿ ಕಿರಣ್ ರಾವ್ ಮತ್ತು ಪಾನಿ ಪ್ರತಿಷ್ಠಾನದ ಸಿಇಒ ಸತ್ಯಜಿತ್ ಭಟ್ಕಲ್ ಅವರು ವೆಬ್ನಾರ್ನ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.