ಹುಬ್ಬಳ್ಳಿ:ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಳ್ಳತನ ಪ್ರಕರಣಕ್ಕೆ ಕಡಿವಾಣ ಇಲ್ಲದಂತಾಗಿದ್ದು, ಸುಮಾರು ಕಳ್ಳತನ ಪ್ರಕರಣ ನಡೆಯುತ್ತಿದ್ದರೂ ಕೂಡ ಪೊಲೀಸ್ ಇಲಾಖೆಯಿಂದ ಕಡಿವಾಣ ಹಾಕಲು ಮಾತ್ರ ಸಾಧ್ಯವಾಗುತ್ತಿಲ್ಲ. ಮನೆ, ಬೈಕ್ ಹಾಗೂ ವಿವಿಧ ರೀತಿಯ ಕಳ್ಳತನ ಪ್ರಕರಣ ನಡೆಯುತ್ತಿದ್ದರೂ ಕಟ್ಟುನಿಟ್ಟಿನ ಕ್ರಮಗಳು ಮಾತ್ರ ಜಾರಿಯಾಗುತ್ತಿಲ್ಲ.
ಹುಬ್ಬಳ್ಳಿ: ಕಾರಿನ ಗ್ಲಾಸ್ ಒಡೆದು ಕಳ್ಳತನ, ಸಿಸಿಟಿವಿಯಲ್ಲಿ ಸೆರೆ
ಹುಬ್ಬಳ್ಳಿಯ ವಿದ್ಯಾನಗರದ ವಿದ್ಯಾವಿಹಾರ ಕಾಲೋನಿಯಲ್ಲಿ ಕಳ್ಳತನದ ಘಟನೆಗಳು ಹೆಚ್ಚಾಗಿ ನಡೆಯುತ್ತಲೇ ಇವೆ.
ಕಾರಿನ ಗ್ಲಾಸ್ ಒಡೆದು ಕಳ್ಳತನ
ವಿದ್ಯಾನಗರದ ವಿದ್ಯಾವಿಹಾರ ಕಾಲೋನಿಯಲ್ಲಿ ವ್ಯಾಗನರ್ ಕಾರಿನಲ್ಲಿ ಬಂದ ಖದೀಮರು ಕಾರಿನ ಗ್ಲಾಸ್ ಒಡೆದು ಕಳ್ಳತನ ಮಾಡಿದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಹುಬ್ಬಳ್ಳಿಯ ವಿದ್ಯಾನಗರದ ವಿದ್ಯಾವಿಹಾರ ಕಾಲೋನಿಯಲ್ಲಿ ಕಳ್ಳತನದ ಘಟನೆಗಳು ಹೆಚ್ಚಾಗಿ ನಡೆಯುತ್ತಲೇ ಇವೆ. ಅಲ್ಲದೇ ಸ್ವಿಫ್ಟ್, ವ್ಯಾಗನರ್, ಟಾಟಾ ಟಿಯಾಗೊ, ಬುಲೇರೊ, ಇನೋವಾದ ಗ್ಲಾಸ್ ಒಡೆದು ವಾಹನದಲ್ಲಿನ ಮ್ಯೂಸಿಕ್ ಸಿಸ್ಟಮ್ ಕಳ್ಳತನ ಮಾಡಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಗುತ್ತಿಗೆದಾರ ಸಂತೋಷ ಮನೆಗೆ ಸಚಿವ ನಿರಾಣಿ ಭೇಟಿ: ವೈಯಕ್ತಿಕ ₹5 ಲಕ್ಷ ಪರಿಹಾರ ವಿತರಣೆ