ಕರ್ನಾಟಕ

karnataka

ETV Bharat / state

ಮುಸ್ಲಿಂ ಯುವತಿ ಜೀವನಕ್ಕೆ ದಾರಿ ತೋರಿದ 'ವಿಘ್ನೇಶ'...! - ಹುಬ್ಬಳ್ಳಿ ಮುಸ್ಲಿಂ ಯುವತಿ ಸುದ್ದಿ

ಹುಬ್ಬಳ್ಳಿಯಲ್ಲಿ ಮುಸ್ಲಿಂ ಧರ್ಮದ ಯುವತಿಯೊಬ್ಬರು ಗಣೇಶನ ಮೂರ್ತಿಗಳ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ವಿಶಿಷ್ಟ್ಯತೆ ಮೂಲಕ ಜನರ ಗಮನ ಸೆಳೆದಿದ್ದಾರೆ.

ಮುಸಲ್ಮಾನ ಯುವತಿ ಜೀವನಕ್ಕೆ ದಾರಿ ತೋರಿದ 'ವಿಘ್ನೇಶ'
ಮುಸಲ್ಮಾನ ಯುವತಿ ಜೀವನಕ್ಕೆ ದಾರಿ ತೋರಿದ 'ವಿಘ್ನೇಶ'

By

Published : May 27, 2020, 10:18 AM IST

Updated : May 27, 2020, 10:25 AM IST

ಹುಬ್ಬಳ್ಳಿ:ತನ್ನಲ್ಲಿರುವ ಕಲೆಯ ಮೂಲಕ ನಗರದ ಮುಸ್ಲಿಂ ಯುವತಿಯೊಬ್ಬಳು ಗಮನ ಸೆಳೆದಿದ್ದಾಳೆ. ತನ್ನನ್ನು ಗಣೇಶ‌ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡು ಧಾರ್ಮಿಕ ಸೌಹಾರ್ದತೆ ಮೆರೆದಿದ್ದಾರೆ.

ಹುಬ್ಬಳ್ಳಿಯ ಗೋಪನಕೊಪ್ಪದ ನಿವಾಸಿ ಅರುಣ‌ ಯಾದವ ಎಂಬುವರು ಕಳೆದ 15 ವರ್ಷಗಳಿಂದ ಗಣೇಶ ಮೂರ್ತಿಗಳನ್ನು ತಯಾರಿಸತ್ತ ಬಂದಿದ್ದಾರೆ. ಇವರ ಬಳಿ ಸುಮನ್ ಹಾವೇರಿ ಎಂಬ ಮುಸ್ಲಿಂ ಯುವತಿ ಗಣೇಶ ವಿಗ್ರಹಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಕೆಲವು ವರ್ಷಗಳಿಂದ ಸುಮನ್ ಮನೆಯಲ್ಲಿ ಕಡುಬಡತನ ಇರುವುದರಿಂದ ಉದ್ಯೋಗ ಕೇಳಿಕೊಂಡು ಬಂದಿದ್ದರಂತೆ. ಆಗ ಅರುಣ ಅವರು ಯುವತಿಗೆ ಕೆಲಸವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

ಗಣೇಶ ಮೂರ್ತಿ ತಯಾರಿಸುತ್ತಿರುವ ಸುಮನ್​ ಹಾವೇರಿ

ಸರ್ಕಾರ ಪಿಓಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿದೆ. ಹೀಗಾಗಿ ಪೋರಬಂದರ್​ನಿಂದ ಮಣ್ಣು ತರಿಸಿ ಕಾಗದದ ಮೂಲಕ ಗಣೇಶ ವಿಗ್ರಹಗಳನ್ನು ತಯಾರಿಸಲಾಗುತ್ತಿದೆ.‌ ಸುಮನ್​ ಅವರು ವಿಘ್ನೇಶ್ವರನ ಮೂರ್ತಿ ತಯಾರಿಸುವ ಮೂಲಕ ಜೀವನ ಕಟ್ಟಿಕೊಂಡಿದ್ದಾರೆ.

ಮುಸ್ಲಿಂ ಯುವತಿ ಜೀವನಕ್ಕೆ ದಾರಿ ತೋರಿದ 'ವಿಘ್ನೇಶ'

ಈ ಯುವತಿಯು ಕಲೆಗೆ ಯಾವುದೇ ಧಾರ್ಮಿಕ ಕಟ್ಟುಪಾಡುಗಳಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದು, ಸಮಾಜಕ್ಕೆ ಮಾದರಿಯಾಗಿದ್ದಾರೆ.

Last Updated : May 27, 2020, 10:25 AM IST

ABOUT THE AUTHOR

...view details