ಧಾರವಾಡ: ವಾಮಾಚಾರಕ್ಕೆಂದು ಸ್ಮಶಾನಕ್ಕೆ ಬಂದಿದ್ದ ವ್ಯಕ್ತಿವೋರ್ವ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಗರದ ಹೊಸ ಯಲ್ಲಾಪುರದಲ್ಲಿ ನಡೆದಿದೆ.
ವಾಮಾಚಾರಕ್ಕೆಂದು ಬಂದು ಸ್ಮಶಾನದಲ್ಲೇ ಹೆಣವಾದ ವ್ಯಕ್ತಿ! - etv bharath
ಸ್ಮಶಾನಕ್ಕೆ ವಾಮಾಚಾರಕ್ಕೆಂದು ಬಂದು ತಾನೇ ಹೆಣವಾದ ವ್ಯಕ್ತಿ- ಧಾರವಾಡದ ಹೊಸ ಯಲ್ಲಾಪುರ ಬಡಾವಣೆಯಲ್ಲಿ ಘಟನೆ
ವ್ಯಕ್ತಿ ಸಾವು
ನಿನ್ನೆ ರಾತ್ರಿ ಸ್ಮಶಾನಕ್ಕೆ ಬಂದಿದ್ದ ನಮಃ ಶಿವಾಯ(65) ಅನ್ನೋ ವ್ಯಕ್ತಿ ಮೃತಪಟ್ಟವನು. ಈತ ದಾವಣಗೆರೆ ಮೂಲದವರೆಂದು ಗುರುತಿಸಲಾಗಿದೆ.
ಈ ವ್ಯಕ್ತಿ ನಗರದ ಹೊಸ ಯಲ್ಲಾಪುರ ಬಡಾವಣೆಯಲ್ಲಿರುವ ಸ್ಮಶಾನಕ್ಕೆ ನಿನ್ನೆ ರಾತ್ರಿ ಬಂದಿದ್ದರು ಎನ್ನಲಾಗಿದೆ. ವಾಮಾಚಾರ ಮಾಡುವಾಗ ಭಯಗೊಂಡಿರಬಹುದು ಅಥವಾ ಕಾರಿನಲ್ಲಿ ಕುಳಿತಲ್ಲಿಯೇ ಹೃದಯಾಘಾತವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕಾರಿನಲ್ಲಿ ವಾಮಾಚಾರಕ್ಕೆ ತಂದಿದ್ದ ಪೂಜಾ ಸಾಮಗ್ರಿ ಪತ್ತೆಯಾಗಿವೆ.