ಹುಬ್ಬಳ್ಳಿ:ಹುಡುಗಿಯ ಮನವೊಲಿಸಲು ದುಬಾರಿ ಬೆಲೆಯ ಗಿಫ್ಟ್ಗಳನ್ನು ಕೊಡೋದನ್ನ ಕೇಳಿದ್ದೇವೆ. ಆದರೆ, ಹುಡುಗಿಯ ಮನವೊಲಿಸಲು ದುಬಾರಿ ಬೆಲೆಯ ವಾಚ್ ಖರೀದಿಸಲು ಬುರ್ಖಾ ಧರಿಸಿಕೊಂಡು ಬಂದು ಈ ವೈದ್ಯ ತಗಲಾಕಿಕೊಂಡಿದ್ದಾನೆ. ಬುರ್ಖಾಧಾರಿಯನ್ನು ಶಿರಸಿ ಮೂಲದ ವೈದ್ಯ ವಸಂತರಾವ್ ಪೊಲೀಸರ ವಿಚಾರಣೆಯಲ್ಲಿ ಬಯಲಾಗಿದೆ.
ಎಷ್ಟೆ ಪ್ರಯತ್ನ ಮಾಡಿದ್ರು ಯಾವ ಹುಡುಗಿಯೂ ವೈದ್ಯನನ್ನ ಮದುವೆಯಾಗಲು ಒಪ್ಪದ ಪರಿಣಾಮ ವೈದ್ಯ ವಸಂತರಾವ್ ಯಾರಾದ್ರು ಹುಡುಗಿಯೊಬ್ಬಳಿಗೆ ದುಬಾರಿ ಬೆಲೆಯ ವಾಚ್ ನೀಡಿ ಮನವೊಲಿಸಲು ಮುಂದಾಗಿದ್ದನಂತೆ. ಅದಕ್ಕಾಗಿಯೇ ದುಬಾರಿ ಬೆಲೆಯ ವಾಚ್ ಖರೀದಿಸಿದ್ದು ಯಾರಿಗೂ ಗೊತ್ತಾಗಬಾರದೆಂದು ಬುರ್ಖಾ ಧರಿಸಿಕೊಂಡು ಆಗಮಿಸಿದ್ದ ಎನ್ನಲಾಗಿದೆ.
ಬುರ್ಖಾ ಧರಿಸಿಕೊಂಡು ಅನುಮಾನಾಸ್ಪದವಾಗಿ ಒಡಾಡುತ್ತಿದ್ದ ವ್ಯ ಮದುವೆಯಾಗದ ಪರಿಣಾಮ ಕಳೆದ ಹಲವಾರು ವರ್ಷಗಳಿಂದ ಮಾನಸಿಕವಾಗಿ ನೊಂದಿರುವ ವೈದ್ಯ ವಸಂತರಾವ್ ಇದೀಗ ಬುರ್ಖಾ ಧರಿಸಿಕೊಂಡು ಬಂದು ವಾಚ್ ಖರೀದಿಸಲು ಮುಂದಾದ ವೇಳೆ ಪೊಲೀಸರ ಅತಿಥಿಯಾಗಿದ್ದ. ವೈದ್ಯನನ್ನ ತೀವ್ರ ವಿಚಾರಣೆಗೆ ಒಳಪಡಿಸಿದ ನಂತರ ವಸಂತರಾವ್ ಮಾನಸಿಕವಾಗಿ ನೊಂದಿರುವ ವಿಚಾರ ತಿಳಿದು ಬಂದಿದ್ದು, ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.
ಘಟನೆಯ ಹಿನ್ನಲೆ:ಭಾನುವಾರ ಸಂಜೆ ನಗರದ ನ್ಯಾಷನಲ್ ಮಾರ್ಕೆಟ್ ಬಳಿ ಇರುವ ಟೈಟಾನ್ ವಾಚ್ ಶೋ ರೂಂಗೆ ಬುರ್ಕಾ ಧರಿಸಿಕೊಂಡು ಬಂದಿದ್ದ ವ್ಯಕ್ತಿ 20ಸಾವಿರ ರೂ. ಮೌಲ್ಯದ ವಾಚ್ ಖರೀದಿ, ಇನ್ನೂ ಅವನ ಹತ್ತಿರ 80ಸಾವಿರ ರೂಪಾಯಿ ನಗದು ಹಣ ಇದ್ದದ್ದನ್ನು ನೋಡಿ, ಇವನ ಹಾವ ಭಾವ ಗಮನಿಸಿದಾಗ ಅಂಗಡಿಯವರಿಗೆ ಇವನ ಮೇಲೆ ಅನುಮಾನ ಬಂದಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು.