ಧಾರವಾಡ:ಎರಡು ಬಸ್ಗಳ ನಡುವೆ ಗೂಡ್ಸ್ ವಾಹನ ಸಿಲುಕಿ ಅಪ್ಪಚ್ಚಿಯಾಗಿದ್ದು, ಹೊರಬರಲಾರದೇ ಗೂಡ್ಸ್ ವಾಹನ ಚಾಲಕ ನರಳಾಡಿದ ಘಟನೆ ಜಿಲ್ಲೆಯ ಕಲಾ ಭವನದ ಹತ್ತಿರ ಸಂಭವಿಸಿದೆ.
ಎರಡು ಬಸ್ಗಳ ನಡುವೆ ಸಿಲುಕಿದ ಗೂಡ್ಸ್ ವಾಹನ: ಚಾಲಕನ ನರಳಾಟ - ಲೇಟೆಸ್ಟ್ ಅಪಘಾತ ಸುದ್ದಿ ಧಾರವಾಡ
ಮುಂದೆ ಇರುವ ಬಸ್ ಬ್ರೇಕ್ ಹಾಕಿದ ಕಾರಣ ರಸ್ತೆ ಬದಿ ಗಾಡಿ ನಿಲ್ಲಿಸಿದ್ದ ಗೂಡ್ಸ್ ವಾಹನದ ಚಾಲಕನಿಗೆ ಹಿಂದಿನಿಂದ ಬಂದು ಇನ್ನೊಂದು ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ಬಸ್ಗಳ ನಡುವೆ ಸಿಲುಕಿದ ಗೂಡ್ಸ್ ವಾಹನ ಸಿಲುಕಿಕೊಂಡು ಹೊರಬರಲಾರದೇ ನರಳಾಡುತ್ತಿದ್ದ ಚಾಲಕನನ್ನು ಸಂಚಾರಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಿಸಿದ್ದಾರೆ.

ಹುಬ್ಬಳ್ಳಿ ಮಂಗಳವಾರ ಪೇಟ ನಿವಾಸಿ ಲೋಹಿತ್ ಲಕ್ಕುಂಡಿಮಠ (28) ಅಪಘಾತಕ್ಕೊಳಗಾದ ಗೂಡ್ಸ್ ವಾಹನ ಚಾಲಕ. ಮುಂದೆ ಇರುವ ಬಸ್ ಬ್ರೇಕ್ ಹಾಕಿದ ಕಾರಣ ರಸ್ತೆ ಬದಿ ಗಾಡಿ ನಿಲ್ಲಿಸಿದ್ದ ಗೂಡ್ಸ್ ವಾಹನದ ಚಾಲಕನಿಗೆ ಹಿಂದಿನಿಂದ ಬಂದು ಇನ್ನೊಂದು ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ಬಸ್ಗಳ ನಡುವೆ ಸಿಲುಕಿದ ಗೂಡ್ಸ್ ವಾಹನ ಸಿಲುಕಿಕೊಂಡು ಹೊರಬರಲಾರದೇ ಚಾಲಕ ನರಳಾಡಿದ್ದಾನೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಮೆಟಲ್ ಕಟರ್ ಬಳಸಿ ಚಾಲಕನನ್ನು ರಕ್ಷಣೆ ಮಾಡಲಾಗಿದೆ.
ಸಂಚಾರಿ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಚಾಲಕನಿಗೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.