ಹುಬ್ಬಳ್ಳಿ: ಭಿಕ್ಷೆ ಬೇಡುವವರು ಎಂದರೆ ಸದಾ ಕಾಲ ಇನ್ನೊಬ್ಬರ ಮುಂದೆ ಕೈಚಾಚುತ್ತಲೇ ಬದುಕುತ್ತಾರೆ ಎನ್ನುವ ನಂಬಿಕೆ ಇದೆ. ಆದರೆ, ಅಂತಹ ಭಿಕ್ಷುಕರಲ್ಲಿಯೂ ದಾನಧರ್ಮ ಮಾಡುವ ಮಹಾನ್ ಗುಣವಿದೆ ಎಂಬುದನ್ನು ಇಲ್ಲೊಬ್ಬ ಭಿಕ್ಷುಕ ತೋರಿಸಿಕೊಟ್ಟಿದ್ದಾರೆ.
ನಗರದ ಅಂಬೇಡ್ಕರ್ ಸರ್ಕಲ್ ಬಳಿ ಇರುವ ಬಿಎಸ್ಎನ್ಎಲ್ ಕಚೇರಿ ಬಳಿ ವ್ಯಕ್ತಿಯೊಬ್ಬರು ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ಈಗ ವಾಣಿಜ್ಯ ನಗರಿಯಲ್ಲಿ ಲಾಕ್‌ಡೌನ್ ಇದೆ. ಅದರಲ್ಲೂ ಇಂದು ಸಂಡೇ ಲಾಕ್‌ಡೌನ್ ಇದ್ದು, ಭಿಕ್ಷುಕರು ತುತ್ತು ಅನ್ನಕ್ಕೆ ಪರದಾಡುತ್ತಿದ್ದಾರೆ. ಅಂತಹುದರಲ್ಲಿ ಇವರು ಜನರು ನೀಡಿದ ಆಹಾರ ಪದಾರ್ಥಗಳನ್ನು ನಾಯಿಗಳಿಗೆ ಹಾಕುವ ಮೂಲಕ ಮಾನವೀಯತೆ ತೋರುತ್ತಿದ್ದಾರೆ.