ಹುಬ್ಬಳ್ಳಿ: ಕಸ ಸಂಗ್ರಹಿಸುವ ವಾಹನ ಡಿಕ್ಕಿಯಾಗಿ ಎಂಟು ಬೈಕ್ಗಳು ಜಖಂಗೊಂಡಿರುವ ಘಟನೆ ಹುಬ್ಬಳ್ಳಿಯ ಏರ್ಪೋರ್ಟ್ ಮುಂಭಾಗದಲ್ಲಿ ನಡೆದಿದೆ.
ಚಾಲಕನಿಗೆ ಮೂರ್ಛೆ ರೋಗ: ಕಸ ಸಂಗ್ರಹಿಸುವ ವಾಹನ ಡಿಕ್ಕಿಯಾಗಿ 8 ಬೈಕ್ಗಳು ಜಖಂ!
ಪಾಲಿಕೆ ವತಿಯಿಂದ ಕಸ ಸಂಗ್ರಹಿಸುವ ವಾಹನ ಚಾಲಕನಿಗೆ ಮೂರ್ಛೆ ರೋಗವಿದ್ದು, ಇಂದು ವಾಹನ ಚಲಾಯಿಸುವಾಗ ಏಕಾಏಕಿ ಮೂರ್ಛೆ ರೋಗ ಉಲ್ಭಣಿಸಿದೆ. ಪರಿಣಾಮ ವಾಹನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು, ಎಂಟು ಬೈಕ್ಗಳು ಜಖಂಗೊಂಡಿವೆ.
ಕಸ ಸಂಗ್ರಹಿಸುವ ವಾಹನ ಡಿಕ್ಕಿಯಾಗಿ 8 ಬೈಕ್ಗಳು ಜಖಂ!
ಪಾಲಿಕೆ ವತಿಯಿಂದ ಕಸ ಸಂಗ್ರಹಿಸುವ ವಾಹನ ಚಾಲಕನಿಗೆ ಮೂರ್ಛೆ ಬಂದ ಪರಿಣಾಮ ವಿಮಾನ ನಿಲ್ದಾಣದ ರಸ್ತೆ ಪಕ್ಕದಲ್ಲಿ ನಿಂತಿದ್ದ ಬೈಕ್ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ 8 ಬೈಕ್ಗಳು ಜಖಂಗೊಂಡಿದ್ದು, ಯಾರಿಗೂ ಗಾಯಗಳಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಅನುಮಾನಾಸ್ಪದ ರೀತಿ ಗನ್ಮ್ಯಾನ್ ಸಾವು.. ಆತ್ಮಹತ್ಯೆಯೋ, ಕೊಲೆಯೋ ಎಂಬುದು ನಿಗೂಢ..