ಹುಬ್ಬಳ್ಳಿ : ಉಕ್ಕಿನ ಮನುಷ್ಯ ಖ್ಯಾತಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ಈ ಬಾರಿ ತಮಿಳುನಾಡು ಪೊಲೀಸರು ವಿಶೇಷವಾಗಿ ಆಚರಿಸಲು ಮುಂದಾಗಿದ್ದಾರೆ.
ಹುಬ್ಬಳ್ಳಿಗೆ ಬುಲೆಟ್ನಲ್ಲಿ ಬಂದ 41 ತಮಿಳುನಾಡು ಪೊಲೀಸರು.. ಕಾರಣ ವಲ್ಲಭಭಾಯಿ ಪಟೇಲ್.. - ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ
ನಗರದ ಚೆನ್ನಮ್ಮ ವೃತ್ತಕ್ಕೆ ಆಗಮಿಸಿದ ತಮಿಳುನಾಡಿನ ಪೊಲೀಸರಿಗೆ, ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಕೆ.ರಾಮರಾಜನ್ ಸ್ವಾಗತಿಸಿದರು. ನಂತರ ಕುಸಗಲ್ ರಸ್ತೆಯಲ್ಲಿರುವ ರಾಯಲ್ ಎನ್ ಫೀಲ್ಡ್ ಶೋರೂಮ್ಗೆ ಭೇಟಿ ನೀಡಿದ ಪೊಲೀಸರು, ಅಲ್ಲಿಂದ ಚೆನ್ನಮ್ಮ ಸರ್ಕಲ್ ಮಾರ್ಗವಾಗಿ ನ್ಯಾಷನಲ್ ಹೈವೇ ಮೂಲಕ ಗುಜರಾತ್‌ಗೆ ಪ್ರಯಾಣ ಬೆಳೆಸಿದರು..
ಅಕ್ಟೋಬರ್ 31 ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ ಹಿನ್ನೆಲೆ ರಾಷ್ಟ್ರೀಯ ಏಕತಾ ದಿನದ ನಿಮಿತ್ತವಾಗಿ ತಮಿಳುನಾಡು ಸರ್ಕಾರದ ಆದೇಶದಂತೆ, ಅಕ್ಟೋಬರ್ 15 ರಿಂದ ತಮಿಳುನಾಡಿನ ಪೊಲೀಸರು ಕನ್ಯಾಕುಮಾರಿಯಿಂದ ಗುಜರಾತ್ ಕೆವಾಡಿಯಾವರೆಗೆ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದಾರೆ. ಈ ರ‍್ಯಾಲಿ ಇಂದು ಹುಬ್ಬಳ್ಳಿಗೆ ತಲುಪಿದೆ.
ನಗರದ ಚೆನ್ನಮ್ಮ ವೃತ್ತಕ್ಕೆ ಆಗಮಿಸಿದ ತಮಿಳುನಾಡಿನ ಪೊಲೀಸರಿಗೆ, ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಕೆ.ರಾಮರಾಜನ್ ಸ್ವಾಗತಿಸಿದರು. ನಂತರ ಕುಸಗಲ್ ರಸ್ತೆಯಲ್ಲಿರುವ ರಾಯಲ್ ಎನ್ ಫೀಲ್ಡ್ ಶೋರೂಮ್ಗೆ ಭೇಟಿ ನೀಡಿದ ಪೊಲೀಸರು, ಅಲ್ಲಿಂದ ಚೆನ್ನಮ್ಮ ಸರ್ಕಲ್ ಮಾರ್ಗವಾಗಿ ನ್ಯಾಷನಲ್ ಹೈವೇ ಮೂಲಕ ಗುಜರಾತ್‌ಗೆ ಪ್ರಯಾಣ ಬೆಳೆಸಿದರು.