ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ಹಾಗೂ ಕ್ಷಮತಾ ಸಮಿತಿ ವತಿಯಿಂದ 2020 ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಇದೇ 20ಹಾಗೂ 21ರಂದು ನಗರದ ಆಕ್ಸ್‌ಫರ್ಡ್ ಕಾಲೇಜ್ ಬಳಿಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು, ಕ್ಷಮತಾ ಸೇವಾ ಸಂಸ್ಥೆ ಸಂಯೋಜಕರಾದ ಗೋವಿಂದ ಜೋಶಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಇದೇ 20ರಿಂದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ... ಬಾನಲ್ಲಿ 26 ದೇಶಗಳ ಸ್ಪರ್ಧಿಗಳ ಚಮತ್ಕಾರ - ಗಾಳಿಪಟ ಉತ್ಸವ
ಹುಬ್ಬಳ್ಳಿಯಲ್ಲಿ ಇದೇ 20ಹಾಗೂ 21ರಂದು 2020 ಅಂತರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಗಾಳಿಪಟ ಉತ್ಸವ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಗಾಳಿಪಟ ಉತ್ಸವ ಆಯೋಜಿಸಲಾಗಿದ್ದು, 26 ದೇಶಗಳ 32 ಆಟಗಾರರು ಹಾಗೂ ಭಾರತದ 18 ಖ್ಯಾತ ಗಾಳಿಪಟ ಆಟಗಾರರು ತಮ್ಮ ವೈಶಿಷ್ಟ್ಯ ಪೂರ್ಣ ಬೃಹತ್ ಗಾಳಿಪಟಗಳನ್ನು ಮುಗಿಲೆತ್ತರಕ್ಕೆ ಹಾರಿಸುವ ಮೂಲಕ ಸಾರ್ವಜನಿಕರನ್ನು ರಂಜಿಸಲಿದ್ದಾರೆ. ಅಷ್ಟೇ ಅಲ್ಲದೇ ಗಾಳಿಪಟ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ ಎಂದು ತಿಳಿಸಿದರು. 21ರಂದು ಗಂಗಾವತಿ ಪ್ರಾಣೇಶ ಅವರ ಹಾಸ್ಯ ಕಾರ್ಯಕ್ರಮವಿರಲಿದೆ. ಎರಡು ದಿನಗಳ ಕಾಲ ನಡೆಯುವ ಈ ಗಾಳಿಪಟ ಉತ್ಸವಕ್ಕೆ 2.5 ಲಕ್ಷ ಜನ ಬರುವ ನಿರೀಕ್ಷೆ ಇದೆ.