ಧಾರವಾಡ: ಜಿಲ್ಲೆಯಲ್ಲಿಂದು ಇಂದು 19 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈಗ ಒಟ್ಟು ಸೋಂಕಿತರ ಸಂಖ್ಯೆ 91ಕ್ಕೆ ಏರಿಕೆಯಾಗಿದೆ.
ಒಂದೇ ದಿನ 19 ಸೋಂಕಿತರು.. 91ಕ್ಕೇರಿದ ಸೋಂಕಿತರ ಸಂಖ್ಯೆ.. - ಧಾರವಾಡ ಲೆಟೆಸ್ಟ್ ನ್ಯೂಸ್
ಅಂತರ್ ಜಿಲ್ಲಾ ಪ್ರವಾಸದಿಂದ ಮೂವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರೆಲ್ಲರಿಗೂ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಕೊರೊನಾ ಹಾವಳಿ ದಿನೇದಿನೆ ಹೆಚ್ಚುತ್ತಿದೆ. ಆರು ತಿಂಗಳ ಗಂಡು ಮಗುವಿಗೂ ಸೋಂಕು ಆವರಿಸಿದೆ. ಪಿ-5969 ರಿಂದ ಮಗುವಿಗೆ( ಪಿ-6261) ಸೋಂಕು ತಗುಲಿದೆ. ಪಿ-5970 ವ್ಯಕ್ತಿಯಿಂದ ಪಿ-6260ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಬಂದ 6 ಜನರಲ್ಲಿ ಕೊರೊನಾ ಸೋಂಕು ಕಾಣಿಸಿದೆ.
ಇನ್ನೂ 4 ಸೋಂಕಿತರು ಜ್ವರ, ಕೆಮ್ಮಿನಿಂದ ದಾಖಲಾಗಿದ್ದಾರೆ. ಪಿ-6252 SARI ಕೇಸ್ ಆಗಿದ್ದು, ಗುಜರಾತ್, ಗೋವಾ, ತಮಿಳುನಾಡಿನಿಂದ ಬಂದಿರುವ ತಲಾ ಒಬ್ಬೊಬ್ಬರಿಗೆ ಸೋಂಕು ಕಾಣಿಸಿದೆ. ಇನ್ನೂ ಅಂತರ್ ಜಿಲ್ಲಾ ಪ್ರವಾಸದಿಂದ ಮೂವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಒಂದೇ ದಿನ 19 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರಿಗೆಲ್ಲರಿಗೂ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.