ಧಾರವಾಡ:ಜಿಲ್ಲೆಯಲ್ಲಿ ಇಂದು 174 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 2,842 ಕ್ಕೇರಿದೆ.
ಧಾರವಾಡದಲ್ಲಿ 174 ಜನರಿಗೆ ಕೊರೊನಾ: ಒಂದೇ ದಿನ ಐವರು ಬಲಿ! - Dharwad news
ಧಾರವಾಡ ಜಿಲ್ಲೆಯಲ್ಲಿ ಇಂದು 174 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸದ್ಯ ಜಿಲ್ಲೆಯಲ್ಲಿ 1,784 ಸಕ್ರಿಯ ಪ್ರಕರಣಗಳಿವೆ.
ಧಾರವಾಡ ಕೊರೊನಾ
ಇಂದು ಕೊರೊನಾಗೆ ಐವರು ಬಲಿಯಾಗಿದ್ದು, ಇದರಿಂದ ಜಿಲ್ಲೆಯಲ್ಲಿ ಮೃತರ ಸಂಖ್ಯೆ 85ಕ್ಕೇರಿದೆ. ಇಂದು ಒಂದೇ ದಿನ 52 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 973 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 1,784 ಸಕ್ರಿಯ ಪ್ರಕರಣಗಳಿವೆ.