ದಾವಣಗೆರೆ: ಜಿಲ್ಲೆಯ ಹೊನ್ನಾಳಿ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸೇತುವೆಗೆ ಡಿಕ್ಕಿ ಹೊಡೆದ ಕಾರು ಹಳ್ಳಕ್ಕೆ ಬಿದ್ದು ಯುವಕ ಸಾವನ್ನಪ್ಪಿದ್ದಾನೆ.
ಪ್ರಕಾಶ್ ಚೆಂಬಪ್ಪ (28) ಮೃತ ಯುವಕ. ಈತ ಬೆಳಗಾವಿ ಜಿಲ್ಲೆಯ ಬಸವನಕುಡಚಿ ಗ್ರಾಮದ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಚೆಂಬಪ್ಪ ಎಂಬುವರ ಪುತ್ರ. ಬೆಳಗಾವಿಯಿಂದ ಶಿವಮೊಗ್ಗಕ್ಕೆ ತನ್ನ ಸ್ನೇಹಿತರನ್ನು ಬಿಟ್ಟು ಹರಿಹರ ಮಾರ್ಗವಾಗಿ ಒಬ್ಬನೇ ಹಿಂದಿರುಗುವಾಗ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.