ಕರ್ನಾಟಕ

karnataka

ETV Bharat / state

ದಾವಣಗೆರೆ: ಗಣೇಶೋತ್ಸವದ ಶೋಭಾಯಾತ್ರೆ ಅಲಂಕಾರ ವೇಳೆ ಕ್ರೇನ್​ ಹರಿದು ಯುವಕ ಸಾವು - ಸ್ಕೂಟಿ ಅಪಘಾತದಲ್ಲಿ ಯುವಕ ಸಾವು

ದಾವಣಗೆರೆಯಲ್ಲಿ ಗಣೇಶೋತ್ಸವ ಶೋಭಾಯಾತ್ರೆ ಅಲಂಕಾರ ವೇಳೆ ಕ್ರೇನ್​ ಹರಿದು ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.

youth-died-in-crane-accident-at-davanagere
ದಾವಣಗೆರೆ : ಗಣೇಶೋತ್ಸವದ ಶೋಭಾಯಾತ್ರೆ ಅಲಂಕಾರ ವೇಳೆ ಕ್ರೇನ್​ ಹರಿದು ಯುವಕ ಸಾವುದಾವಣಗೆರೆ : ಗಣೇಶೋತ್ಸವದ ಶೋಭಾಯಾತ್ರೆ ಅಲಂಕಾರ ವೇಳೆ ಕ್ರೇನ್​ ಹರಿದು ಯುವಕ ಸಾವುದಾವಣಗೆರೆ : ಗಣೇಶೋತ್ಸವದ ಶೋಭಾಯಾತ್ರೆ ಅಲಂಕಾರ ವೇಳೆ ಕ್ರೇನ್​ ಹರಿದು ಯುವಕ ಸಾವು

By ETV Bharat Karnataka Team

Published : Oct 12, 2023, 7:28 AM IST

ದಾವಣಗೆರೆ : ಗಣೇಶೋತ್ಸವದ ಶೋಭಾಯಾತ್ರೆ ಅಲಂಕಾರದಲ್ಲಿ ತೊಡಗಿದ್ದ ಯುವಕನ ಮೇಲೆ ಕ್ರೇನ್​ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಗರದ ಪಿಬಿ ರಸ್ತೆಯ ರೇಣುಕಾಮಂದಿರದ ಬಳಿ ಬುಧವಾರ ಸಂಜೆ ನಡೆದಿದೆ. ಮೃತ ಯುವಕನನ್ನು ಬಸವರಾಜಪೇಟೆ ನಿವಾಸಿ ಪೃಥ್ವಿರಾಜ್ (26) ಎಂದು ಗುರುತಿಸಲಾಗಿದೆ.

ನಗರದ ಹಿಂದೂ ಮಹಾಗಣಪತಿಯ ಶೋಭಾಯಾತ್ರೆ ಅಕ್ಟೋಬರ್​ 14ರಂದು ನಡೆಯಲಿದೆ. ಈ ಸಂಬಂಧ ಪಿಬಿ ರಸ್ತೆಯಲ್ಲಿ ಕೇಸರಿ ಧ್ವಜಗಳನ್ನು ಕಟ್ಟಿ ಅಲಂಕಾರ ಮಾಡಲಾಗುತ್ತಿತ್ತು. ಈ ವೇಳೆ, ಕ್ರೇನ್​ ಚಾಲಕ ವಾಹನವನ್ನು ಹಿಂದಕ್ಕೆ ಚಲಾಯಿಸಿದ್ದಾನೆ. ಈ ಸಂದರ್ಭ ಅಲ್ಲಿಯೇ ನಿಂತಿದ್ದ ಪೃಥ್ವಿರಾಜ್​ ತಲೆ ಮೇಲೆ ಕ್ರೇನ್​ ಹರಿದಿದ್ದು, ಗಂಭೀರ ಗಾಯಗೊಂಡ ಪೃಥ್ವಿರಾಜ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮಗನನ್ನು ಕಳೆದುಕೊಂಡ ಪೋಷಕರ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.‌ ಬಡಾವಣೆ ಪೊಲೀಸ್ ಪ್ರಕರಣ ದಾಖಲಾಗಿದೆ.

ಸ್ಕೂಟಿ ಅಪಘಾತದಲ್ಲಿ ಯುವಕ ಸಾವು :ಮೀನು ಸಾಗಾಟದ ಲಾರಿಗೆ ಹಿಂದಿನಿಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರ ಸಾವನ್ನಪ್ಪಿದ್ದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ನಗರದ ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆಯಲ್ಲಿ ಬುಧವಾರ ಮುಂಜಾನೆ ನಡೆದಿತ್ತು. ಮೃತ ಯುವಕನನ್ನು ಉಳ್ಳಾಲ ಕೋಟೆಕಾರ್‌ ನಿವಾಸಿ ಹನೀಫ್ ಎಂಬವರ ಪುತ್ರ ಅಝ್‌ವೀನ್ (21)ಎಂದು ಗುರುತಿಸಲಾಗಿತ್ತು.

ಮೃತ ಅಝ್‌ವೀನ್ ಬುಧವಾರ ಬೆಳಗ್ಗೆ 3:30ರ ಸುಮಾರಿಗೆ ಬೈಕ್​ನಲ್ಲಿ ತೊಕ್ಕೊಟ್ಟಿನಿಂದ ಮಂಗಳೂರಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಅಝ್‌ವೀನ್ ಬೈಕ್​ನಲ್ಲಿ ತೆರಳುತ್ತಿದ್ದಾಗ ನೇತ್ರಾವತಿ ಸೇತುವೆಯ ಮುಂಭಾಗದಲ್ಲಿ ಚಲಿಸುತ್ತಿದ್ದ ಮೀನು ಸಾಗಣೆ ಲಾರಿ ಚಾಲಕ ಹಠಾತ್ ಬ್ರೇಕ್ ಹಾಕಿದ್ದ. ಈ ವೇಳೆ, ನಿಯಂತ್ರಣ ಕಳೆದುಕೊಂಡ ಬೈಕ್ ಸವಾರ ಹಿಂದಿನಿಂದ ಮೀನು ಸಾಗಾಟದ ಲಾರಿಗೆ ಡಿಕ್ಕಿ ಹೊಡೆದಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡ ಅಝ್‌ವೀನ್​ನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಆದಾಗಲೇ ಅಝ್‌ವೀನ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಮೃತರ ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಉಳ್ಳಾಲದಲ್ಲಿ ಸರಣಿ ಅಪಘಾತ :ಕರ್ನಾಟಕ ಸಾರಿಗೆ ಬಸ್ ಹಾಗೂ ದ್ವಿಚಕ್ರ ವಾಹನಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡು, ಮತ್ತೊಬ್ಬ ವ್ಯಕ್ತಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿರುವ ಘಟನೆ ಮಂಗಳವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೋಟು ಸಮೀಪದ ಕೋಟೆಕಾರ್​ ಬೀರಿ ಜಂಕ್ಷನ್​ನಲ್ಲಿ ನಡೆದಿತ್ತು. ಅಪಘಾತದಲ್ಲಿ ಅಡ್ಕ ನಿವಾಸಿ ಕೋಟೆಕಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್(65) ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ :ಕಾರಿನ ಚಕ್ರದಡಿ ಸಿಲುಕಿ ಹಲವು ಮೀಟರ್‌ ದೂರ ಎಳೆದೊಯ್ಯಲ್ಪಟ್ಟು ವ್ಯಕ್ತಿ ಸಾವು

ABOUT THE AUTHOR

...view details