ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ನಿನ್ನೆ ಮೃತ ಸೋಂಕಿತನ ಶವ ಇರಿಸಿದ ಆಂಬ್ಯುಲೆನ್ಸ್ ಚಾಲನೆ ಮಾಡಿ ಗ್ರಾಮಕ್ಕೆ ತೆರಳಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು. ಇಂದು ಕೋವಿಡ್ ಕೇರ್ ಸೆಂಟರ್ನಲ್ಲಿರುವ ಸೋಂಕಿತರಿಗೆ ಯೋಗ ಹೇಳಿಕೊಟ್ಟು ಆತ್ಮಸ್ಥೈರ್ಯ ತುಂಬಿದ್ದಾರೆ.
ಕೋವಿಡ್ ಸೋಂಕಿತರೊಂದಿಗೆ ಯೋಗಾಭ್ಯಾಸ ಮಾಡಿದ ಶಾಸಕ ರೇಣುಕಾಚಾರ್ಯ - davanagere yoga program
ಕೋವಿಡ್ ಹಿನ್ನೆಲೆಯಲ್ಲಿ ಶಾಸಕ ರೇಣುಕಾಚಾರ್ಯ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಸುದ್ದಿಯಲ್ಲಿದ್ದಾರೆ.
ಯೋಗ
ಹೊನ್ನಾಳಿ ತಾಲೂಕಿನ ಹೆಚ್.ಕಡದಕಟ್ಟೆ ಗ್ರಾಮದಲ್ಲಿರುವ ಕೋವಿಡ್ ಕೇರ್ ಸೆಂಟರ್ಗೆ ಆಗಮಿಸಿದ ಅವರು ಬೆಳಗ್ಗೆ ಸೋಂಕಿತರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಯೋಗಾಸನ ಭಂಗಿಗಳನ್ನು ಮಾಡಿದರು.
ಇದನ್ನೂ ಓದಿ:ಸೋಂಕಿತನ ಮೃತದೇಹ ತರಲು ಗ್ರಾಮಸ್ಥರ ನಕಾರ: ಶಾಸಕ ರೇಣುಕಾಚಾರ್ಯ ಏನ್ಮಾಡಿದ್ರು ಗೊತ್ತಾ...!
Last Updated : Jun 1, 2021, 12:44 PM IST