ಕರ್ನಾಟಕ

karnataka

ETV Bharat / state

ಯಡಿಯೂರಪ್ಪ ಮತ್ತೆ ಸಿಎಂ ಆಗಲಿದ್ದಾರೆ: ರೇಣುಕಾಚಾರ್ಯ - ಸ್ಪೀಕರ್

ನಾವು ಆಪರೇಷನ್ ಮಾಡಿಲ್ಲ, ರಾಷ್ಟ್ರೀಯ ನಾಯಕರ ಕೈವಾಡವು ಇಲ್ಲ. ಮೈತ್ರಿ ಸರ್ಕಾರದ ತಾರತಮ್ಯದಿಂದ ಸ್ವಾಭಿಮಾನ ಹೊಂದಿರುವ ಶಾಸಕರೆಲ್ಲ ರಾಜೀನಾಮೆ ನೀಡಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.

ಶಾಸಕ ಎಂ ಪಿ ರೇಣುಕಾಚಾರ್ಯ

By

Published : Jul 6, 2019, 4:39 PM IST

ದಾವಣಗೆರೆ:ರಕ್ತದಲ್ಲಿ‌ ಬರೆದುಕೊಡುತ್ತೇನೆ, ಈ ಸರ್ಕಾರ ಪತನ ಆಗುತ್ತೆ ಎಂದು ಈ ಹಿಂದೆ ಹೇಳಿದ್ದೆ. ನಾನು ಹೇಳಿದಂತೆ ಶಾಸಕರ ರಾಜೀನಾಮೆ ಪರ್ವ ನಡೀತಿದೆ. ಮಾನ ಮಾರ್ಯಾದೆ ಇದ್ದರೆ ಸಿಎಂ ಕುಮಾರಸ್ವಾಮಿ ಫ್ಯಾಕ್ಸ್ ಮ‌ೂಲಕ ಅಮೆರಿಕದಿಂದಲೇ ರಾಜೀನಾಮೆ ನೀಡಲಿ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹೇಳಿದಂತೆ ಸರ್ಕಾರ ಪತನದ ಹಾದಿ ಹಿಡಿದಿದೆ‌. ಸ್ಪೀಕರ್ ಅವರು ಉಮೇಶ್ ಜಾಧವ್ ಅವರ ರಾಜೀನಾಮೆ ಸ್ವೀಕಾರ ಮಾಡಿದಂತೆ ಈ ಶಾಸಕರುಗಳ ರಾಜೀನಾಮೆ ಸ್ವೀಕಾರ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಶಾಸಕ ಎಂ.ಪಿ.ರೇಣುಕಾಚಾರ್ಯ

ನಾವು ಆಪರೇಷನ್ ಮಾಡಿಲ್ಲ, ರಾಷ್ಟ್ರೀಯ ನಾಯಕರ ಕೈವಾಡವು ಇಲ್ಲ. ಮೈತ್ರಿ ಸರ್ಕಾರದ ತಾರತಮ್ಯದಿಂದ ಸ್ವಾಭಿಮಾನ ಹೊಂದಿರುವ ಶಾಸಕರೆಲ್ಲ ರಾಜೀನಾಮೆ ನೀಡಿದ್ದಾರೆ.‌ ಯಡಿಯೂರಪ್ಪ ಮತ್ತೆ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.

ABOUT THE AUTHOR

...view details