ದಾವಣಗೆರೆ:ಮಗಳಿಗೂ ಹಾಗೂ ತವರಿಗೂ ಅವಿನಾಭಾವ ಸಂಬಂಧ, ಆ ಸಂಬಂಧ ಹೇಗಿರುತ್ತದೆ ಎಂಬುದು ಪ್ರತಿಯೊಂದು ಹೆಣ್ಣು ಮಗಳಿಗೆ ತಿಳಿದಿರುತ್ತದೆ. ಆದ್ರೆ ದಾವಣಗೆರೆಯಲ್ಲಿ ಮಾತ್ರ ಇದಕ್ಕೆ ವಿರುದ್ಧವಾಗಿದೆ. ತಂದೆಯ ಆಸರೆ ಇಲ್ಲದೇ ಕೊರಗುತ್ತಿದ್ದ ಮಗಳಿಗೆ ತಾಯಿಯು ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಲು ಒಂದಿಷ್ಟು ಹಣವನ್ನು ತವರು ಮನೆಯಲ್ಲಿ ಕೂಡಿಟ್ಟಿದ್ದಳು. ಆದರೆ, ಇದೀಗ ಆ ಮಹಿಳೆ ತನ್ನ ಮಗಳಿಗೆ ಶಸ್ತ್ರ ಚಿಕಿತ್ಸೆ ಕೊಡಿಸಲು ಕೊಟ್ಟ ಹಣವನ್ನು ಮರಳಿ ಕೇಳಿದ್ರೇ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರಂತೆ ಈ ದುಷ್ಟರು.
ವೈಯಕ್ತಿಕ ಜೀವನಲ್ಲಿ ಬಹಳಷ್ಟು ನೊಂದಿರುವ ಹೆಣ್ಣು ಮಗಳಿಗೆ ತವರು ಆಸರೆಯಾಗಬೇಕಿತ್ತು. ಆದ್ರೇ ಇಲ್ಲಿ ತವರಿನವರು ಗೀತಾಳ ಸಮಸ್ಯೆಗೆ ಸ್ಪಂದಿಸದೇ ವಿರೋಧಿಗಳಾಗಿದ್ದಾರೆ. ಕಾರಣಾಂತರಗಳಿಂದ ಗಂಡನಿಂದ ದೂರವೇ ಇದ್ದ ಹರಪ್ಪನಹಳ್ಳಿ ತಾಲೂಕಿನ ನಂದ್ಯಾಲ್ ಗ್ರಾಮದ ಗೀತಾ, ಇಬ್ಬರು ಪುಟ್ಟ ಮಕ್ಕಳನ್ನು ಇಟ್ಟುಕೊಂಡು ಬೇರೆಯೇ ಜೀವನ ನಡೆಸುತ್ತಿದ್ದಾರೆ. ಮಗಳಿಗೆ ಹೃಯದ ಸಂಬಂಧಿ ಕಾಯಿಲೆ ಇದ್ದುದ್ದರಿಂದ ಮುಂದೊಂದು ದಿನ ಈ ಹಣ ಉಪಯೋಗಕ್ಕೆ ಬರುತ್ತದೆ ಎಂದು ತಿಳಿದು ಚಿಕಿತ್ಸೆ ಬೇಕಾಗುವಷ್ಟು ಹಣವನ್ನು ತವರಿನಲ್ಲಿ ಕೂಡಿಟ್ಟಿದ್ದಳು. ಆದರೆ, ಇದೀಗ ಚಿಕಿತ್ಸೆ ಕೊಡಿಸಲು ಗೀತಾ ತನ್ನ ತವರಿನವರಿಗೆ ಹಣ ಕೇಳಿದ್ರೆ ನೀನು ನಮಗೆ ಹಣವನ್ನೇ ನೀಡಿಲ್ಲ ಎಂದು ದಬಾಯಿಸಿ ಕಳಿಸಿದ್ದಾರಂತೆ.
ದಾವಣಗೆರೆಯ ಮಹಾವೀರ್ ನಗರದಲ್ಲಿವರುವ ತನ್ನ ತವರಿನವರು ಗೀತಾಳನ್ನು ಸಾಕಿ ಸಲಹ ಬೇಕಿತ್ತು. ಆದ್ರೆ ಅದೇ ತವರಿನವರು ಗೀತಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ತವರಿನಲ್ಲಿ ಹಣ ಕೂಡಿಟ್ಟಿದ್ರೇ ಭದ್ರವಾಗಿರುತ್ತದೆ ಎಂದು ಗಮನದಲ್ಲಿಟ್ಟುಕೊಂಡು ಗೀತಾ ತನ್ನ ಅಣ್ಣ ಚಂದ್ರಶೇಖರ್ ಎಂಬುವರ ಕೈಯಲ್ಲಿ 4.15 ಲಕ್ಷ ಹಾಗೂ ಎರಡು ಗ್ರಾಂ ಚಿನ್ನವನ್ನು ಮಗಳಾದ ಭೂಮಿಕಾಳ ಚಿಕಿತ್ಸೆಗೆಂದು ತೆಗೆದಿಡಲು ನೀಡಿದ್ದರಂತೆ. ಇದೀಗ ಗೀತಾ ತನ್ನ ಮಗಳಿಗೆ ಚಿಕಿತ್ಸೆ ನೀಡಲು ಹಣ ಕೇಳಿದ್ರೆ ನನಗೆ ನೀನು ಯಾರು ಎಂಬುದೇ ಗೊತ್ತಿಲ್ಲ ಎಂಬಂತೆ ಅಣ್ಣ ಚಂದ್ರಶೇಖರ್ ವರ್ತಿಸುತ್ತಿದ್ದಾನಂತೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ್ರು ಸಿಗದ ನ್ಯಾಯ..!