ಕರ್ನಾಟಕ

karnataka

ETV Bharat / state

ದಾವಣಗೆರೆ: ಮನೆಯಲ್ಲಿ ಒಬ್ಬರೇ ಕಾಲ ಕಳೆಯುತ್ತಿದ್ದ ಗೃಹಿಣಿ ಮೇಲೆ ಅತ್ಯಾಚಾರ ಎಸಗಿ ಕೊಲೆ! - ದಾವಣಗೆರೆ ಅಪರಾಧ ಸುದ್ದಿ

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ‌ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ಕಂಡು ಬಂದಿದೆ.

Woman rape and murder in Davanagere, Woman rape in Davanagere, Davanagere crime news, murder in Davanagere, ದಾವಣಗೆರೆಯಲ್ಲಿ ಮಹಿಳೆಯ ಅತ್ಯಾಚಾರ ಮತ್ತು ಕೊಲೆ, ದಾವಣಗೆರೆಯಲ್ಲಿ ಮಹಿಳೆ ಅತ್ಯಾಚಾರ, ದಾವಣಗೆರೆ ಅಪರಾಧ ಸುದ್ದಿ, ದಾವಣಗೆರೆಯಲ್ಲಿ ಕೊಲೆ,
ಸ್ಥಳಕ್ಕೆ ಪೊಲೀಸರು ದೌಡು

By

Published : Jun 25, 2022, 10:58 AM IST

ದಾವಣಗೆರೆ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಅತ್ಯಾಚಾರ ಮಾಡಿ ಕೊಲೆ‌ ಮಾಡಿರುವ ಆರೋಪ ಹಿನ್ನೆಲೆ ಹೊನ್ನಾಳಿ ಪೋಲಿಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಮನೆಯಲ್ಲಿ ವಿವಾಹಿತ ಮಹಿಳೆ ಒಬ್ಬರೇ ಇರುವುದನ್ನ ಆರೋಪಿ ಗಮನಿಸಿದ್ದಾನೆ. ಬಳಿಕ 40 ವರ್ಷದ ಗೃಹಿಣಿ ಮೇಲೆ ಅತ್ಯಾಚಾರ ಎಸಗಿ ಕೊಂದು ಹಾಕಿ ಏನು ತಿಳಿಯದಂತೆ ಸುಮ್ಮನ್ನಿದ್ದನು. ಇಂತಹ ಅಮಾನವೀಯ ಕೃತ್ಯ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಓದಿ:ಬಾಲಕಿಯರ ಮೇಲೆ ಅತ್ಯಾಚಾರ ಆರೋಪ: ಬೈಕ್‌ಸಮೇತ ಇಬ್ಬರಿಗೆ ಬೆಂಕಿ ಹಚ್ಚಿದ ಗ್ರಾಮಸ್ಥರು

ಮೃತಳ ಪತಿ ಕೆಲಸದ ನಿಮಿತ್ತ ಗ್ರಾಮವೊಂದಕ್ಕೆ ತೆರಳಿದ್ದರು. ತಮ್ಮ ಕೆಲಸ ಮುಗಿಸಿ ಮನೆಗೆ ಮರಳಿದಾಗ ಪತ್ನಿ ಶವವಾಗಿ ಬಿದ್ದಿರುವುದನ್ನು ಕಂಡು ದಂಗಾದರು. ಕೂಡಲೇ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದರು. ಪೊಲೀಸರು ಯಾರ ಮೇಲಾದರೂ ಅನುಮಾನ ಇದೆಯಾ ಎಂದು ಪ್ರಶ್ನಿಸಿದಾಗ ಗ್ರಾಮದ ಹರೀಶ್​ ಎಂಬ ವ್ಯಕ್ತಿ ಹೆಸರನ್ನು ಹೇಳಿದ್ದಾರೆ. ಈ ಹಿನ್ನೆಲೆ ಹೊನ್ನಾಳಿ ಪೋಲಿಸರು ಹರೀಶ್ ಎಂಬಾತನನ್ನು ಬಂಧಿಸಿ, ವಿಚಾರಣೆ ಕೈಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ರಿಷ್ಯಂತ್, ಡಿವೈಎಸ್ಪಿ ಡಾ.ಸಂತೋಷ್, ಸಿಪಿಐ ದೇವರಾಜ್, ಪಿಎಸ್‌ಐ ಬಸವನಗೌಡ ಬಿರಾದರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸುವುದಾಗಿ ಪೋಲಿಸರು ತಿಳಿಸಿದ್ದಾರೆ.

ABOUT THE AUTHOR

...view details