ಕರ್ನಾಟಕ

karnataka

ETV Bharat / state

ಮನೆಯಲ್ಲಿ ಮಹಿಳೆಯ ಶವಪತ್ತೆ: ಕೊಲೆ ಎಂದು ಸಂಬಂಧಿಕರ ಆರೋಪ - ಮದ್ಯಪಾನ ಮಾಡುವ ವೇಳೆ ಗಲಾಟೆ

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದ ಮನೆಯೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.

ತೇಜಸ್ವಿನಿ
ತೇಜಸ್ವಿನಿ

By ETV Bharat Karnataka Team

Published : Nov 8, 2023, 4:44 PM IST

ದಾವಣಗೆರೆ :ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗೃಹಿಣಿಯನ್ನು ಕೊಲೆ ಮಾಡಿದ್ದಾರೆ ಎಂದು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ತೇಜಸ್ವಿನಿ (30) ಸಾವನ್ನಪ್ಪಿದ ಗೃಹಿಣಿ ಎಂದು ತಿಳಿದುಬಂದಿದೆ. ಇನ್ನು, ಘಟನೆ ನಡೆಯುತ್ತಿದ್ದಂತೆ ಪತಿ ಗುಡದಯ್ಯ ಸೇರಿದಂತೆ ಸಂಬಂಧಿಕರು ನಾಪತ್ತೆಯಾಗಿದ್ದು, ಮೃತ ಮಹಿಳೆಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ನಾಲ್ಕು ವರ್ಷದ ಹಿಂದೆ ತೇಜಸ್ವಿನಿ ಹಾಗೂ ಪತಿ ಗುಡದಯ್ಯ ಅವರ ವಿವಾಹವಾಗಿತ್ತು. ನಿತ್ಯ ಅನಗತ್ಯವಾಗಿ ತೇಜಸ್ವಿನಿಗೆ ಪತಿ ಹಾಗೂ ಆತನ ಸಹೋದರಿಯರು‌ ಹಿಂಸೆ ನೀಡುತ್ತಿದ್ದರೆಂದು ಸಂಬಂಧಿಕರು ಆರೋಪ ಮಾಡಿದ್ದಾರೆ. ಹರಿಹರ ಗ್ರಾಮಾಂತರ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಹರಿಹರ ತಹಶೀಲ್ದಾರ್ ಹಾಗೂ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌ ಪ್ರಕರಣ ದಾಖಲಿಸಿಕೊಂಡಿರುವ ಹರಿಹರ ಗ್ರಾಮೀಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹರಿಹರ ಗ್ರಾಮಾಂತರ ಠಾಣೆಯ ಪಿಎಸ್ಐ ಅರವಿಂದ್ ಹೇಳಿದ್ದಿಷ್ಟು: "ತೇಜಸ್ವಿನಿಯನ್ನು ಕೊಲೆ ಮಾಡಿ ನೇಣು ಹಾಕಲಾಗಿದೆ ಎಂದು ಸಂಬಂಧಿಕರು ದೂರು ನೀಡಿದ್ದಾರೆ. ಈ ಸಂಬಂಧ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಇದರ ಸಂಬಂಧ ಹರಿಹರ ತಹಶಿಲ್ದಾರ್ ಹಾಗೂ ಡಿವೈಎಸ್ಪಿ ಇಬ್ಬರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಶವ ಪರೀಕ್ಷೆ ಬಳಿಕವೇ ಇದು ಕೊಲೆಯೋ ಇಲ್ಲ, ಆತ್ಮಹತ್ಯೆಯೋ ಎಂಬ ಮಾಹಿತಿ ಬಹಿರಂಗವಾಗಲಿದೆ. ಶವ ಪರೀಕ್ಷೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ".

ಕೈಗೆ ಬಾಯಿಯಿಂದ ಕಚ್ಚಿ ಗಾಯಗೊಳಿಸಿದ ಯುವಕ (ಪ್ರತ್ಯೇಕ ಪ್ರಕರಣ): ಇಬ್ಬರು ಯುವಕರ ನಡುವೆ ಕ್ಷುಲ್ಲಕ‌ ಕಾರಣಕ್ಕೆ ಜಗಳವಾಗಿದ್ದು, ಜಗಳದಲ್ಲಿ ಯುವಕನೊಬ್ಬ ಬಾಯಿಯಿಂದ ಕೈಗೆ ಕಚ್ಚಿ ಗಾಯಗೊಳಿಸಿರುವ ಘಟನೆ ದಾವಣಗೆರೆ ನಗರದ ವಸಂತ ಚಿತ್ರಮಂದಿರ ಬಳಿ ನಡೆದಿದೆ. ಲೋಕೇಶ್ ಗಾಯಗೊಂಡ ಯುವಕನಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಗಾಯಗೊಂಡ ಯುವಕ ಲೋಕೇಶ್

ಸಚಿನ್ ಬನ್ನಿಕಟ್ಟಿ ಲೋಕೇಶ್​ಗೆ ಬಾಯಿ ಹಾಕಿ ಕಚ್ಚಿರುವ ಯುವಕ. ಸಚಿನ್ ಬನ್ನಿಕಟ್ಟಿ ಎಂಬ ಯುವಕ ಹಾಗೂ ಲೋಕೇಶ್​ ನಡುವೆ ಜಗಳವಾಗಿದೆ. ವಾಗ್ವಾದ ಮಾಡುತ್ತಾ ಲೋಕೇಶ್ ಮೇಲೆ ಸಚಿನ್ ಹಲ್ಲೆ ನಡೆಸಿದ್ದಾರೆ. ಇದಲ್ಲದೆ ಹಳೇ ದ್ವೇಷದ ಹಿನ್ನೆಲೆ ಇಬ್ಬರಿಗೂ ವಾಗ್ವಾದ ನಡೆದು ಸಚಿನ್​ನು ಲೋಕೇಶ್​ನ ಕೈಗೆ ಬಾಯಿಯಿಂದ ಕಚ್ಚಿ ಗಾಯಗೊಳಿಸಿದ್ದಾರೆ. ಬಸವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮದ್ಯಪಾನದ ನಶೆಯಲ್ಲಿ ಇಬ್ಬರ ನಡುವೆ ಜಗಳ :ದಾವಣಗೆರೆ ನಗರದ ವಸಂತ ಚಿತ್ರಮಂದಿರದ ಬಳಿ ಇರುವ ಬಾರ್​ವೊಂದರಲ್ಲಿ ಲೋಕೇಶ್​ ಹಾಗೂ ಸಚಿನ್ ಇಬ್ಬರು ಮದ್ಯಪಾನ ಮಾಡುವ ವೇಳೆ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಗಲಾಟೆ ಹೊಡೆದಾಡುವ ತನಕ ಹೋಗಿದ್ದು, ಈ ವೇಳೆ ಸಚಿನ್ ಲೋಕೇಶ್​ ಅವರ ಬಲ‌ ಕೈಗೆ ಬಾಯಿಯಿಂದ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದಾನೆ ಎಂದು ಗಾಯಾಳು ಲೋಕೇಶ್​ ಆರೋಪಿಸಿದ್ದಾನೆ. ಈ ಸಂಬಂಧ ಠಾಣೆಗೆ ದೂರು ದಾಖಲು ಮಾಡುವುದಾಗಿ ತಿಳಿಸಿದ್ದಾನೆ.

ಇದನ್ನೂ ಓದಿ :ರಾಯಚೂರು: ನಿರ್ಜನ ಪ್ರದೇಶದಲ್ಲಿ ಮಹಿಳೆಯ ಶವ ಪತ್ತೆ.. ಕೊಲೆ ಶಂಕೆ

ABOUT THE AUTHOR

...view details