ಕರ್ನಾಟಕ

karnataka

ETV Bharat / state

ನೂರಕ್ಕೆ ನೂರು ನಾವು 15 ಕ್ಷೇತ್ರ ಗೆಲ್ತೇವೆ: ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಮಾಜಿ ಸಿಎಂ ಯಡಿಯೂರಪ್ಪ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಡುವೆ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ನೂರಕ್ಕೆ ನೂರು 15 ಸ್ಥಾನದಲ್ಲಿ ನಾವು ಗೆಲ್ಲಲಿದ್ದೇವೆ ಪುನರುಚ್ಚರಿಸಿದ್ದಾರೆ.

former-cm-yedyurappa
ಮಾಜಿ ಸಿಎಂ ಯಡಿಯೂರಪ್ಪ

By

Published : Nov 29, 2021, 5:37 PM IST

Updated : Nov 29, 2021, 9:51 PM IST

ದಾವಣಗೆರೆ: ವಿಧಾನ ಪರಿಷತ್ ಚುನಾವಣೆಯಲ್ಲಿ 25 ರಲ್ಲಿ 20 ಸ್ಥಾನಗಳಿಗೆ ಬಿಜೆಪಿ ಸ್ಪರ್ಧಿಸಿದ್ದು, ಈ ಪೈಕಿ 15 ಸ್ಥಾನ ಗೆಲ್ಲುತ್ತೇವೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 140 ಸ್ಥಾನಗಳನ್ನ ಗೆಲ್ಲುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ 20 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಿದೆ. ಇದರಲ್ಲಿ ನೂರಕ್ಕೆ ನೂರು 15 ಕ್ಷೇತ್ರ ಗೆದ್ದು ಪರಿಷತ್​​ನಲ್ಲಿ ಬಹುಮತ ಪಡೆಯಲಿದ್ದೇವೆ ಎಂದರು. ಈ ವೇಳೆ ಎಸ್.ಆರ್ ಪಾಟೀಲ್ ಬಿಜೆಪಿ ಸೇರುವ ಬಗ್ಗೆ ಮಾತನಾಡಿ ಇದಕ್ಕೆ ಸಂಬಂಧಿಸಿದಂತೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.

ನೂರಕ್ಕೆ ನೂರು ನಾವು 15 ಕ್ಷೇತ್ರ ಗೆಲ್ತೇವೆ: ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ

ಮುರುಗೇಶ್​​​ ನಿರಾಣಿ ಮುಂದಿನ ಸಿಎಂ ಆಗಲಿದ್ದಾರೆ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಎಸ್​ವೈ, ಅವರು ತಮಾಷೆಗೆ ಹಾಗೆ ಹೇಳಿದ್ದಾರೆ ಎಂದರು.

ಇದನ್ನೂ ಓದಿ:ಆಸ್ಪತ್ರೆಗೆ ಹೋಗಿ ಮೃತದೇಹ ಕೇಳಿದ್ರೆ ಗದರಿದ್ದರು : ಇಎಸ್​ಐ ಆಸ್ಪತ್ರೆ ವಿರುದ್ಧ ಮೃತರ ಸಂಬಂಧಿಕರ ಆಕ್ರೋಶ

Last Updated : Nov 29, 2021, 9:51 PM IST

ABOUT THE AUTHOR

...view details