ದಾವಣಗೆರೆ:ಉತ್ತಮ ಮಳೆಯಾದ ಹಿನ್ನೆಲೆ ಏಷ್ಯಾ ಎರಡನೇ ಅತಿದೊಡ್ಡ ಕೆರೆ ದಾವಣಗೆರೆ ಜಿಲ್ಲೆಯ ಸೂಳೆಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಇದರ ಪರಿಣಾಮ ಚನ್ನಗಿರಿ ತಾಲೂಕಿನ ಕೆಂಗಾಪುರ ಹಾಗೂ ಕಬ್ಬಳ ಗ್ರಾಮದ ನಡುವೆ ಹರಿಯುವ ಹರಿದ್ರಾವತಿ ನದಿಗೆ ನಿರ್ಮಿಸಿರುವ ಸೇತುವೆ ಮೇಲೆಲ್ಲ ನೀರು ಹರಿಯುತ್ತಿದೆ.
1985ರಲ್ಲಿ ಎನ್. ಜಿ. ಹಾಲಪ್ಪ ಶಾಸಕರಾಗಿದ್ದಾಗ ಕಟ್ಟಿರೋ ಈ ಸಣ್ಣ ಸೇತುವೆಗೆ ಕಾಯಕಲ್ಪಬೇಕಾಗಿದೆ. 35 ವರ್ಷಗಳಿಂದ ಈ ಹಳ್ಳಕ್ಕೆ ಮೇಲ್ಸೇತುವೆ ಮಾಡುವಂತೆ ಎಲ್ಲ ಸರ್ಕಾರಗಳಿಗೂ ಮನವಿ ಮಾಡಿದ್ರೂ ಪ್ರಯೋಜನ ಆಗಿಲ್ಲ. ಹೀಗಾಗಿ ಬೇರೆ ಊರುಗಳಿಗೆ ಹೋಗುವವರು, ತಮ್ಮ ಜಮೀನುಗಳಿಗೆ ತೆರಳುವ ರೈತರು ಬಹಳ ಕಷ್ಟ ಪಡಬೇಕಾಗಿದೆ.
30 ವರ್ಷಗಳಿಂದ ಹೋರಾಡ್ತಿದ್ರೂ ಸೇತುವೆಗೆ ಸಿಕ್ಕಿಲ್ಲ ಕಾಯಕಲ್ಪ ಸೇತುವೆ ಮೇಲೆ ನೀರು ಬಂದಿರೋದ್ರಿಂದ ರಸ್ತೆ ಬಂದ್ ಆಗಿದೆ. ಮಕ್ಕಳು ಶಾಲೆಗೆ ಹೋಗಲು ಬೇರೆ ದಾರಿ ಇಲ್ಲ. ಹೀಗಾಗಿ ಟ್ರ್ಯಾಕ್ಟರ್ ಮೂಲಕವೇ ಸೇತುವೆ ದಾಟಬೇಕಾದ ಸ್ಥಿತಿ ಇದೆ. ಕಬಳ, ತ್ಯಾವಣಗಿ, ಹೊಸೂರು, ಕೆರೆಬೀಳಚಿ, ಕಣವೆ ಬಿಳ್ಚಿ ಸೇರಿ ಬೇರೆ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು ಟ್ರ್ಯಾಕ್ಟರ್ಗಾಗಿ ಕಾದು ಕುಳಿತು ಶಾಲೆ ಸೇರುವಂತಾಗಿದೆ. ನೀರು ತುಂಬಿರುವ ಸೇತುವೆ ಮೇಲೆ ಟ್ರ್ಯಾಕ್ಟರ್ನಲ್ಲಿ ಹೋಗಲು ಮಕ್ಕಳು ಬಹಳ ಭಯ ಪಡ್ತಾರೆ.
30 ವರ್ಷ ಕಳೆದರೂ ಮೇಲ್ಸೇತುವೆ ಕನಸು ಕನಸಾಗೇ ಇದೆ. ಸೇತುವೆ ಕಟ್ಟಿ ಅಂತ ಒತ್ತಾಯ ಮಾಡಿ ಇಲ್ಲಿನ ಜನ್ರಿಗೂ ಸಾಕಾಗಿ ಹೋಗಿದೆ. ಈ ಸಲ ಸೇತುವೆ ಕಟ್ಟದೇ ಇದ್ರೆ ದೊಡ್ಡ ಹೋರಾಟ ಮಾಡಲು ಊರಿನ ಜನ ತೀರ್ಮಾನ ಮಾಡಿದ್ದಾರೆ.