ದಾವಣಗೆರೆ: ನೀರು ಕುಡಿಯಲೆಂದು ಕೆರೆಗೆ ಇಳಿದ ಎತ್ತುಗಳು ಈಜಲಾಗದೆ ಜನರ ಮುಂದೆಯೇ ಪ್ರಾಣ ಬಿಟ್ಟ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ನಡೆದಿದೆ.
ಕತ್ತಿಗೆ ಗ್ರಾಮದ ರೈತ ಮಹಾಲಿಂಗಪ್ಪ ಎಂಬುವರಿಗೆ ಸೇರಿದ 2 ಎತ್ತುಗಳು ಸಾವನಪ್ಪಿವೆ. ಇದರಿಂದಾಗಿ ರೈತನ ಆಕ್ರಂದನ ಮುಗಿಲು ಮುಟ್ಟಿದೆ. ಎತ್ತುಗಳು ಗದ್ದೆಯಿಂದ ಬಂದು ನೀರು ಕುಡಿಯಲು ಕೆರೆಗೆ ಇಳಿದಿವೆ. ಆದರೆ, ಆಳ ಹೆಚ್ಚಾಗಿದ್ದರಿಂದ ಈಜಲಾಗದೆ ಮುಳುಗಿ ಜನರ ಮುಂದೆಯೇ ಸಾವನಪ್ಪಿವೆ.