ಕರ್ನಾಟಕ

karnataka

ಶೀಘ್ರದಲ್ಲೇ ನಿವೃತ್ತ ಸೈನಿಕರಿಗೆ ನಿವೇಶನ ನೀಡಲಾಗುವುದು: ಶಾಸಕ ಎಸ್.ರಾಮಪ್ಪ

By

Published : Oct 5, 2020, 8:29 AM IST

ಸೈನಿಕ ಅಭಿಮಾನಿ ಬಳಗದ ವತಿಯಿಂದ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ ಯೋಧ ಪ್ರಕಾಶ್ ಟಿ. ಲಮಾಣಿ ಅವರನ್ನು ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು.

Davangere
ನಿವೃತ್ತಿಹೊಂದಿ ಗ್ರಾಮಕ್ಕೆ ಆಗಮಿಸಿದ ಸೈನಿಕನಿಗೆ ಅದ್ದೂರಿ ಸ್ವಾಗತ

ಹರಿಹರ: ದೇಶ ಕಾಯುವ ಕಾಯಕ ಮಾಡಿ ನಿವೃತ್ತಿ ಹೊಂದಿ ತಾಯ್ನಾಡಿಗೆ ಆಗಮಿಸಿದ ಸೈನಿಕರೆಲ್ಲರಿಗೂ ಶೀಘ್ರದಲ್ಲೇ ನಿವೇಶನಗಳನ್ನು ನೀಡಲಾಗುವುದು ಎಂದು ಶಾಸಕ ಎಸ್. ರಾಮಪ್ಪ ಭರವಸೆ ನೀಡಿದರು.

ಸೈನಿಕ ಅಭಿಮಾನಿ ಬಳಗದ ವತಿಯಿಂದ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ ಯೋಧ ಪ್ರಕಾಶ್ ಟಿ. ಲಮಾಣಿ ಅವರನ್ನು ಮೆರವಣಿಗೆಯ ಮೂಲಕ ಶ್ರೀ ಹರಿಹರೇಶ್ವರ ದೇವಸ್ಥಾನದಿಂದ ಮಾಜೇನಹಳ್ಳಿ ಗ್ರಾಮದೇವತೆ ದೇವಸ್ಥಾನಕ್ಕೆ ಕರೆತರಲಾಯಿತು. ಈ ಸಂದರ್ಭದಲ್ಲಿ ಅವರನ್ನು ಗೌರವಿಸಿ ಮಾತನಾಡಿದ ಶಾಸಕರು, ಕಳೆದ 15 ವರ್ಷಗಳಿಂದ ನಮ್ಮ ಕ್ಷೇತ್ರದಲ್ಲಿ ಯಾವುದೇ ನಿವೇಶನ, ವಸತಿ ಸೌಲಭ್ಯಗಳನ್ನು ನೀಡಿರುವುದಿಲ್ಲ. ಆದ್ದರಿಂದ ನನ್ನ ಅವಧಿಯಲ್ಲಿ ಬಡವರು, ಶ್ರಮಿಕರು, ಪರಿಶಿಷ್ಟ ಜಾತಿ, ವರ್ಗದವರಿಗೆ ಸೌಲಭ್ಯ ನೀಡುವ ಸಂದರ್ಭದಲ್ಲಿ ನಿವೃತ್ತ ಸೈನಿಕರನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಯುವ ಮುಖಂಡ ನಂದಿಗಾವಿ ಎನ್.ಹೆಚ್.ಶ್ರೀನಿವಾಸ್ ಮಾತನಾಡಿ, ನಮ್ಮ ಯೋಧ ಪ್ರಕಾಶ್​ ಅವರು ಸುಮಾರು 17 ವರ್ಷಗಳ ಕಾಲ ಸೈನ್ಯದಲ್ಲಿದ್ದು, ಭಾರತ ಮಾತೆಗೆ ಸೇವೆ ಸಲ್ಲಿಸಿ ನಮ್ಮ ಹರಿಹರಕ್ಕೆ ಕೀರ್ತಿ ತಂದಿದ್ದಾರೆ. ಅವರು ತಮ್ಮ ಸೇವೆಯನ್ನು ಮೊದಲು ತರಬೇತಿಯೊಂದಿಗೆ ಹೈದರಾಬಾದ್​​ನಿಂದ ಪ್ರಾರಂಭಿಸಿ ಅಸ್ಸಾಂ, ಪಂಜಾಬ್, ನಾಸಿಕ್, ನಾಗಾಲ್ಯಾಂಡ್, ಲಡಾಖ್​ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಭಾರತ ಮಾತೆ ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭ ನಗರಸಭೆ ಸದಸ್ಯ ಎನ್. ರಜನಿಕಾಂತ್, ಮುಖಂಡರಾದ ರಾಘವೇಂದ್ರ ಉಪಾಧ್ಯಾಯ, ಕಿರಣ್ ಬೊಂಗಾಳೆ, ಕೃಷ್ಣ ರಾಜೋಳಿ, ಕಿರಣ್ ಭೂತೆ, ಚೇತನ್ ಮತ್ತು ಅವರ ಗೆಳೆಯರ ಬಳಗ, ನಿವೃತ್ತ ಯೋಧನ ಪತ್ನಿ ಸುಶೀಲಮ್ಮ, ಪುತ್ರಿಯರಾದ ತನುಶ್ರೀ ಮತ್ತು ತೇಜಸ್ವಿ ಹಾಗೂ ಕುಟುಂಬದ ಹಲವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ‌

ABOUT THE AUTHOR

...view details